ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರಿಷಸ್ನಲ್ಲಿ ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸುವಲ್ಲಿ ಭಾರತ ಸಹಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾರಿಷಸ್ ಪ್ರಧಾನಿ ನವೀನ್ಚಂದ್ರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಮತ್ತು ಮಾರಿಷಸ್ ಹಿಂದೂ ಮಹಾಸಾಗರದಿಂದ ಮಾತ್ರವಲ್ಲದೆ ಸಂಪ್ರದಾಯಗಳು ಮತ್ತು ಸಂಸ್ಕೃತಿಯಿಂದಲೂ ಸಂಪರ್ಕ ಹೊಂದಿವೆ ಎಂದರು.
ಬಳಿಕ 140 ಕೋಟಿ ಭಾರತೀಯರ ಪರವಾಗಿ ಪ್ರಧಾನಿ ಮೋದಿ ಅವರು ಮಾರಿಷಸ್ ಜನತೆಗೆ ರಾಷ್ಟ್ರೀಯ ದಿನದಂದು ಅಭಿನಂದನೆ ಸಲ್ಲಿಸಿದರು ಮತ್ತು ಮಾರಿಷಸ್ ಗೆ ಮತ್ತೊಮ್ಮೆ ಬರುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿದ್ದಾರೆ.