ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅತಿಯಾದ ಬಿಸಿಲಿನಿಂದ ಜನ ಕಂಗಾಲಾಗಿದ್ದು, ಇಂದು ಸಣ್ಣ ಮಳೆ ರಿಲೀಫ್ ನೀಡಿದೆ. ರಾಜಧಾನಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಈಗಾಗಲೇ ಮಳೆ ಸುರಿದಿದ್ದು, ಹಲವು ಭಾಗಗಳಲ್ಲಿ ಕಪ್ಪು ಮೋಡ ಇದೆ.
ಇಂದು ಮತ್ತು ನಾಳೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಮಾನ ಇಲಾಖೆ ಮೂನ್ಸಚನೆ ನೀಡಿದೆ. ಹೀಗಿರುವಾಗ ಇತ್ತ ಮಂಗಳೂರು, ಹಾಸನದಲ್ಲಿ ಮಳೆಯ ಸಿಂಚನವಾಗಿದೆ. ಹೀಗಾಗಿ ಜನರಿಗೆ ಸಂತಸ ಉಂಟಾಗಿದೆ.