ಹೊಸದಿಗಂತ ವರದಿ,ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಬಹುತೆಕ ಭಾಗಗಳಲ್ಲಿ ಬುಧವಾರ ರಾತ್ರಿ ಭರ್ಜರಿ ಮಳೆಯಾಗಿದೆ.
ಮೂಲ್ಕಿ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಮಳೆ ವಿಪರೀತ ಸಂಕಷ್ಟ ಉಂಟುಮಾಡಿತ್ತು.
ತಾಲೂಕಿನಲ್ಲಿ ಐದಾರು ಕಡೆಗಳಲ್ಲಿ ನಡೆಯುತ್ತಿದ್ದ ಯಕ್ಷಗಾನಗಳಿಗೆ, ಶಿಮಂತೂರು ದೇವಸ್ಥಾನದ ಜಾತ್ರೆ, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನ ಸೇರಿದಂತೆ ವಿವಿಧೆಡೆ ನಡೆಯಬೇಕಾಗಿದ್ದ ನೇಮಗಳಿಗೆ ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆಯಿಂದ ಅಡಚಣೆ ಆಯಿತು.
ತಾಲೂಕಿನಾದ್ಯಂತ ಹತ್ತಾರು ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದವು. ಮಿಂಚು ಗುಡುಗು ವಿಪರೀತವಾಗಿತ್ತು.
ಬೆಳ್ತಂಗಡಿ, ಬಂಟ್ವಾಳ,ಮೂಡಬಿದಿರೆ ,ಪುತ್ತೂರು, ಸುಳ್ಯ ತಾಲೂಕುಗಳಲ್ಲಿಯೂ ಭಾರೀ ಮಳೆಯಾಗಿದೆ. ಹಲವೆಡೆ ವಿದ್ಯುತ್ ಪುರೈಕೆ ಅಸ್ತವ್ಯಸ್ತವಾಗಿದೆ.