ಟೆನಿಸ್‌ ಕೋಚ್‌ನನ್ನು ರಿಕ್ಷಾ ಚಾಲಕ ಮಾಡಿದ ಕೊರೋನಾ! ಆಟೋ ಒಳಗೆ ಭಾವನಾತ್ಮಕ ನೋಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾದಿಂದಾಗಿ ಅದೆಷ್ಟೋ ಜನ ಜೀವ, ಜೀವನ ಕಳೆದುಕೊಂಡಿದ್ದಾರೆ. ಸಾವಿರಾರು ಜನರ ಬದುಕುವ ದಾರಿಯನ್ನು ಮುಚ್ಚಿ ಬಿಟ್ಟಿತ್ತು. ಇದಕ್ಕೆ ಮತ್ತೊಂದು ಉದಾಹರಣೆ ಕರ್ನಾಟಕ ಟೇಬಲ್ ಟೆನಿಸ್ ಕೋಚ್ ಆಗಿದ್ದ ವ್ಯಕ್ತಿ ಇದೀಗ ಜೀವನ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ವೃತ್ತಿ ಮಾಡುತ್ತಿದ್ದಾರೆ.

ಕೊರೋನಾಗೂ ಮುನ್ನ ಗುರುಮೂರ್ತಿ ಎನ್‌ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ತಂಡದ ಪೂರ್ಣಾವಧಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೋವಿಡ್‌ನಿಂದಾಗಿ ಗುರುಮೂರ್ತಿ ಕೂಡ ಕೆಲಸ ಕಳೆದುಕೊಂಡರು. ಆದರೆ ಜೀವನ ನಿರ್ವಹಣೆ ಮಾಡುವುದಕ್ಕಾಗಿ ಆಟೋ ಚಾಲಕನ ಕೆಲಸ ಆರಿಸಿಕೊಂಡರು.

ಆಟೋ ಓಡಿಸುವುದರ ಜೊತೆಗೆ ಈಗಲೂ ಕೋಚಿಂಗ್‌ ಮಾಡೋದಕ್ಕೆ ತಯಾರಾಗಿದ್ದೇನೆ. ಯಾರಿಗಾದರೂ ಟೆನಿಸ್‌ ಕಲಿಯುವ ಆಸಕ್ತಿ ಇದ್ದರೆ ನನ್ನನ್ನು ಕಾಂಟಾಕ್ಟ್‌ ಮಾಡಿ ಎಂದು ತಮ್ಮ ನಂಬರ್‌ನ್ನು ಹಾಕಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here