ಕೆಎಎಸ್ ಮರುಪರೀಕ್ಷೆಗೆ ಸೂಚನೆ ನೀಡೋಲ್ಲ: ಭಾಷಾಂತರ ಅದ್ವಾನದ ಬಗ್ಗೆ ಏನಂದ್ರು ಸಿಎಂ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿನ ಭಾಷಾಂತರ ಅದ್ವಾನ ವಿಚಾರವಾಗಿ ವಿಧಾನಸಭೆಯಲ್ಲಿ ವಿಪಕ್ಷಗಳು ಎತ್ತಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಭಾಷಾಂತರ ಅದ್ವಾನ ವಿಚಾರ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ವಿಚಾರಣೆಯಲ್ಲಿದೆ. ಹೀಗಾಗಿ, ಈ ಹಂತದಲ್ಲಿ ಮರುಪರೀಕ್ಷೆಗೆ ಸೂಚನೆ ನೀಡಲು ಆಗುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಎರಡನೇ ಬಾರಿಯೂ ಆಗಿರುವ ತಪ್ಪುಗಳನ್ನು ಪರಿಶೀಲಿಸಲು ವಿಷಯತಜ್ಞರ ಸಮಿತಿಯನ್ನು ಕೆಪಿಎಸ್ ಸಿ ರಚಿಸಿತ್ತು. ಪರಿಶೀಲನೆ ಬಳಿಕ 6 ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ವಿಷಯ ತಜ್ಞರ ಸಮಿತಿ ನೀಡುವ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ. ಮತ್ತೊಂದೆಡೆ, ಅಭ್ಯರ್ಥಿಗಳು ಕೂಡ ಕೆಎಟಿ ಮೊರೆ ಹೋಗಿರುವ ಕಾರಣ ಮರುಪರೀಕ್ಷೆಗೆ ಸೂಚನೆ ನೀಡಲಾಗದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!