ಗೋಧಿ ಕಡಿ ಪಾಯಸ ಆರೋಗ್ಯಕರ ಮತ್ತು ರುಚಿಕರವಾದ ಒಂದು ಸ್ವೀಟ್. ಕರ್ನಾಟಕದ ವಿಶೇಷ ಸಿಹಿ ತಿಂಡಿಗಳಲ್ಲಿ ಇದೂ ಒಂದು. ಇದು ಪೌಷ್ಟಿಕಾಂಶಗಳಿಂದ ಕೂಡಿದ್ದು, ಮಕ್ಕಳಿಂದ ದೊಡ್ಡವರ ತನಕ ಎಲ್ಲರಿಗೂ ತಿನ್ನಲು ಇಷ್ಟ.
ಬೇಕಾಗುವ ಸಾಮಗ್ರಿಗಳು
ಗೋಧಿ ಕಡಿ (ಬ್ರೋಕನ್ ವೀಟ್) – ½ ಕಪ್
ಬೆಲ್ಲ – ½ ಕಪ್
ಹಾಲು – 2 ಕಪ್
ನೀರು – 1.5 ಕಪ್
ಏಲಕ್ಕಿ ಪುಡಿ– ¼ ಚಮಚ
ಗೋಡಂಬಿ– 8-10
ದ್ರಾಕ್ಷಿ – 10-12
ತುಪ್ಪ– 1 ಟೀಚಮಚ
ಮಾಡುವ ವಿಧಾನ
ಮೊದಲಿಗೆ ಒಂದು ಕುಕ್ಕರ್‌ಗೆ ಗೋಧಿ ಕಡಿ ಮತ್ತು 1.5 ಕಪ್ ನೀರು ಹಾಕಿ 2-3 ವಿಸಿಲ್‌ಗಳ ತನಕ ಬೇಯಿಸಿ.
ಇನ್ನೊಂದು ಪ್ಯಾನ್‌ನಲ್ಲಿ ಬೆಲ್ಲಕ್ಕೆ ½ ಕಪ್ ನೀರು ಬೆರೆಸಿ ಕರಗುವವರೆಗೆ ಬೇಯಿಸಿ. ನಂತರ ಶೋಧಿಸಿಕೊಳ್ಳಿ. ಬೇಯಿಸಿದ ಗೋಧಿ ಕಡಿಗೆ ಬೆಲ್ಲದ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಬೇಯಿಸಬೇಕು. ನಂತರ ಹಾಲು ಸೇರಿಸಿ, ಚೆನ್ನಾಗಿ ಕುದಿಸಿ. ಈಗ ಏಲಕ್ಕಿ ಪುಡಿ ಬೆರೆಸಿಕೊಳ್ಳಿ.
ಕೊನೆಯದಾಗಿ ಕಾದ ತುಪ್ಪದಲ್ಲಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಪಾಯಸಕ್ಕೆ ಸೇರಿಸಿದರೆ ಗೋಧಿ ಕಡಿ ಪಾಯಸ ರೆಡಿ.