ಹೋಳಿ ಎಂದರೆ ಬಣ್ಣಗಳ ಹಬ್ಬ, ಉತ್ಸಾಹ, ಸ್ನೇಹ ಮತ್ತು ಸಂಭ್ರಮದ ಉತ್ಸವ. ಆದರೆ, ಮಹಿಳೆಯರು ಈ ಹಬ್ಬವನ್ನ ಆಚರಿಸಲು ಸ್ವಲ್ಪ ಹಿಂದೆ ಮುಂದೆ ನೋಡುತ್ತಾರೆ. ಕಾರಣ ಸೇಫ್ಟಿ. ಮಹಿಳೆಯರು ಸರಿಯಾದ ಯೋಜನೆ, ಸುರಕ್ಷತಾ ಕ್ರಮಗಳು ಮತ್ತು ಜಾಣ್ಮೆಯಿಂದ, ಹೋಳಿಯನ್ನು ಆಡಬಹುದು. ನಿಮ್ಮ ಹಬ್ಬವನ್ನು ಸುರಕ್ಷಿತವಾಗಿಸಲು ಕೆಲವು ಟಿಪ್ಸ್ ಗಳು ಇಲ್ಲಿವೆ.
ಸರಿಯಾದ ಸ್ಥಳವನ್ನು ಆಯ್ಕೆಮಾಡಿ
ಎಲ್ಲಾ ಹೋಳಿ ಆಚರಣೆಗಳು ಒಂದೇ ಆಗಿರುವುದಿಲ್ಲ! ಮಥುರಾ ಮತ್ತು ವೃಂದಾವನದಂತಹ ನಗರಗಳು ಭವ್ಯವಾದ ಸಾಂಪ್ರದಾಯಿಕ ಹಬ್ಬ. ದೆಹಲಿಯ ಹೋಳಿ ಪಾರ್ಟಿಗಳು. ಪಶ್ಚಿಮ ಬಂಗಾಳದ ಬಸಂತ ಉತ್ಸವ ಹೀಗೆ ಹಲವು ಕಡೆ ಹಲವು ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ. ಸ್ವಲ್ಪ ಸಂಶೋಧನೆ ಮಾಡಿ, ನಿಮ್ಮ ಸೌಕರ್ಯ ಮಟ್ಟಕ್ಕೆ ಹೊಂದಿಕೆಯಾಗುವ ಸ್ಥಳವನ್ನು ಆರಿಸಿ.
ಸರಿಯಾದ ಬಟ್ಟೆ ಧರಿಸಿ
ಬಿಳಿ ಅಥವಾ ಗಾಢ ಬಣ್ಣದ, ಹಾಳಾಗುವ ಬಟ್ಟೆಗಳನ್ನು ಧರಿಸಿ. ನೆನೆಯುವ ಸಂಭವವಿರುವುದರಿಂದ ಹೆಚ್ಚು ಪಾರದರ್ಶಕ ಬಟ್ಟೆಗಳನ್ನು ಧರಿಸಬೇಡಿ. ಲೆಗ್ಗಿಂಗ್ಸ್ ಅಥವಾ ಜಾಗಿಂಗ್ ಪ್ಯಾಂಟ್‌ಗಳೊಂದಿಗೆ ಸಡಿಲವಾದ, ಉದ್ದ ತೋಳಿನ ಕುರ್ತಾ ಉತ್ತಮ ಆಯ್ಕೆಯಾಗಿದೆ.
ಚರ್ಮ ಮತ್ತು ಕೂದಲನ್ನು ರಕ್ಷಿಸಿಕೊಳ್ಳಿ
ಹೊರಗೆ ಹೆಜ್ಜೆ ಹಾಕುವ ಮೊದಲು ನಿಮ್ಮ ಮುಖ, ತೋಳುಗಳು ಮತ್ತು ಕಾಲುಗಳಿಗೆ ತೆಂಗಿನಕಾಯಿ ಎಣ್ಣೆ ಹಚ್ಚಿ. ಕೂದಲನ್ನು ಕಟ್ಟಿಕೊಳ್ಳಿ, ಜೊತೆಗೆ ಕ್ಯಾಪ್ ಅಥವಾ ಸ್ಕಾರ್ಫ್ ಧರಿಸಿ.
ಗುಂಪಿನಲ್ಲಿ ಇರಿ, ಎಚ್ಚರಿಕೆಯಿಂದಿರಿ
ನೀವು ಸಾರ್ವಜನಿಕವಾಗಿ ಹೋಳಿ ಆಚರಿಸುತ್ತಿದ್ದರೆ, ಯಾವಾಗಲೂ ಗುಂಪಿನೊಂದಿಗೆ ಇರಿ. ಜನ ನಿಬಿಡ ಬೀದಿಗಳಲ್ಲಿ ಹೋಗುವುದನ್ನು ತಪ್ಪಿಸಿ.
ಭಾಂಗ್ ಬೇಡ
ಭಾಂಗ್, ಬೆರೆಸಿದ ಪಾನೀಯ, ಭಾರತದ ಹಲವು ಭಾಗಗಳಲ್ಲಿ ಹೋಳಿ ಹಬ್ಬದ ಪ್ರಧಾನ ಖಾದ್ಯ. ಈ ಪಾನೀಯ ಬೇಕಾದರೆ ಮಾತ್ರ ಕುಡಿಯಿರಿ ಇಲ್ಲವಾದರೆ ಕುಡಿಯಲು ಹೋಗಬೇಡಿ..
ಅಗತ್ಯ ವಸ್ತುಗಳು ನಿಮ್ಮ ಜೊತೆ ಇರಲಿ
ಹೋಳಿ ಹಬ್ಬದಲ್ಲಿ ಜೇಬುಗಳ್ಳತನ ಅಸಾಮಾನ್ಯವೇನಲ್ಲ , ಆದ್ದರಿಂದ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯಿರಿ. ಕ್ರಾಸ್‌ಬಾಡಿ ಬ್ಯಾಗ್ ಅಥವಾ ಸುರಕ್ಷಿತ ಜಿಪ್ ಹೊಂದಿರುವ ಸೊಂಟದ ಬ್ಯಾಗ್ ನಿಮಗೆ ಉತ್ತಮ ಆಯ್ಕೆಯಾಗಿದೆ.
ನಿರ್ಗಮನವನ್ನು ಯೋಜಿಸಿ
ಹೋಳಿ ಸಂಭ್ರಮದ ನಂತರ ಸುರಕ್ಷಿತವಾಗಿ ಹಿಂತಿರುಗಲು ಮುಂಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಿ. ಅದು ಕ್ಯಾಬ್, ಆಟೋ-ರಿಕ್ಷಾ ಅಥವಾ ಹೋಟೆಲ್ ಪಿಕಪ್ ಆಗಿರಬಹುದು.