ಹೊಸದಿಗಂತ ವರದಿ,ಹಾಸನ:
ಕಾಡಾನೆ ದಾಳಿಯಿಂದ ಇಂದು ಮೊತ್ತೋರ್ವ ಕೂಲಕಾರ್ಮಿಕ ಮಹಿಳೆ ಬಲಿಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ, ಕೋಗೋಡು ಗ್ರಾಮದಲ್ಲಿ ನಡೆದಿದೆ.
ಸುಶೀಲಮ್ಮ (೬೩) ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಮಹಿಳೆ. ಭಾನುಪ್ರಕಾಶ್ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಸುಶೀಲಮ್ಮನ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಕಾಡಾನೆ ಮಹಿಳೆಯನ್ನು ಸೊಂಡಲಿನಿoದ ಎತ್ತಿ ಬಿಸಾಡಿ, ತಲೆ ಭಾಗವನ್ನು ತುಳಿದು ಮಹಿಳೆ ಜೀವ ತೆಗೆದಿದೆ. ಕಳೆದು ಎರಡು ತಿಂಗಳ ಅಂತರದಲ್ಲಿ ಇದು ಕಾಡಾನೆ ದಾಳಿಯಿಂದ ಮೃಟಪಟ್ಟವರ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.
ಅರಣ್ಯ ಸಚಿವರು ಆಗಮಿಸುವಂತೆ ರಸ್ತೆ ತಡೆದು ಆಗ್ರಹ : ಕಾಡಾನೆ ದಾಳಿಯಿಂದ ಮಹಿಳೆ ಸಾವು ಪ್ರಕರಣ ಹಿನ್ನೆಲೆ ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಗ್ರಾಮಸ್ಥರು ಹಾಗೂ ಸ್ಥಳೀಯರು ಟೈಯರ್‌ಗೆ ಬೆಂಕಿ ಹಚ್ಚಿ ರಸ್ತೆಯಲ್ಲಿ ಧರಣಿ ಕುಳಿತಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸುತ್ತ ಅರಣ್ಯ ಸಚಿವರು ಬರುವವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಸ್ಥಳಕ್ಕೆ ಅರಣ್ಯ ಸಚಿವರು ಆಗಮಿಸುವಂತೆ ಆಗ್ರಹಿಸುತ್ತಿದ್ದಾರೆ.