ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂದೆದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಂಗು ರಂಗಿನ ಹಬ್ಬ ಹೋಳಿಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಂಭ್ರಮದಿಂದ ಆಚರಿಸಿದರು.

ಯುಪಿಯ ಗೋರಖನಾಥ ದೇವಸ್ಥಾನದಲ್ಲಿ ನಡೆದ ಆಚರಣೆಯಲ್ಲಿ ಯೋಗಿ ಅವರು ಭಾಗವಹಿಸಿ, ಹಬ್ಬದ ಸಂತೋಷದಲ್ಲಿ ಪಾಲ್ಗೊಂಡರು. ಇದೇ ವೇಳೆ, ಅವರು ಭಗವಾನ್ ನರಸಿಂಹ ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಜನರ ಮೇಲೆ ಪುಷ್ಪವೃಷ್ಟಿ ಮಾಡಿದರು. ಸುತ್ತಲೂ ನೆರೆದಿದ್ದ ಜನರ ಮೇಲೆ ಬಣ್ಣವನ್ನು ಎರಚಿ ಸಂಭ್ರಮಿಸಿದರು.

Imageಈ ವೇಳೆ ಮಾತನಾಡಿದ ಅವರು,ಜಗತ್ತಿನ ಯಾವುದೇ ದೇಶ ಅಥವಾ ಧರ್ಮದಲ್ಲಿ ಸನಾತನ ಧರ್ಮದಷ್ಟು ಶ್ರೀಮಂತವಾದ ಹಬ್ಬಗಳ ಪರಂಪರೆ ಇಲ್ಲ ಎಂದು ಹೇಳಿದರು.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!