ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ. ಸದ್ಯಕ್ಕೆ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್‌ಗೆ ಛಾವಾ ಸೇರ್ಪಡೆಯಾಗಿದ್ದು, 730 ಕೋಟಿ ರೂ. ಕಲೆಕ್ಷನ್ ಮಾಡಿದೆ.
‘ಛಾವಾ’ ಚಿತ್ರ ಇದುವರೆಗೆ ದೇಶಾದ್ಯಂತ 546 ಕೋಟಿ ರೂ. ಗಳಿಸಿದೆ. ಅದರಲ್ಲಿ ಹಿಂದಿ ಆವೃತ್ತಿ 534.45 ಕೋಟಿ ರೂ. ಗಳಿಸಿದೆ. ತೆಲುಗು ಆವೃತ್ತಿಯ ಗಳಿಕೆ 12.55 ಕೋಟಿ ರೂ ಆಗಿದೆ. ಬಂದಿರುವ ಮಾಹಿತಿಯ ಪ್ರಕಾರ, ‘ಛಾವಾ’ ವಿಶ್ವಾದ್ಯಂತ 730 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇಲ್ಲಿಯವರೆಗೆ, ವಿಕ್ಕಿ ಕೌಶಲ್ ಅವರ ಚಿತ್ರವು ಸನ್ನಿ ಡಿಯೋಲ್ ಅವರ ‘ಗದರ್ 2′, ಸಲ್ಮಾನ್ ಖಾನ್ ಅವರ ‘ಸುಲ್ತಾನ್’ ಮತ್ತು ರಣಬೀರ್ ಕಪೂರ್ ಅವರ ‘ಸಂಜು’ ಚಿತ್ರಗಳನ್ನು ಮೀರಿಸಿದೆ. ಹಾಗಾಗಿ, ‘ಛಾವಾ’ ಚಿತ್ರವು ರಣಬೀರ್ ಅವರ ಬ್ಲಾಕ್‌ಬಸ್ಟರ್ ಚಿತ್ರ ‘ಅನಿಮಲ್’ ದಾಖಲೆಯನ್ನು ಮುರಿಯಲು ಕೇವಲ ಕೆಲವೇ ಕೋಟಿ ರೂ.ಗಳಷ್ಟು ದೂರದಲ್ಲಿದೆ. ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅವರ ‘ಸ್ತ್ರೀ 2′ ಚಿತ್ರದ ಗಳಿಕೆಯ ದಾಖಲೆಯನ್ನು ಮುರಿಯಲು ‘ಛಾವಾ’ ಇನ್ನೂ 63 ಕೋಟಿ ರೂ. ಗಳಿಸಬೇಕಾಗಿದೆ.