ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಮಯ ಮೊದಲ ಲಕ್ಷಣಗಳನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ. ಬ್ರೆಸ್ಟ್ ಕ್ಯಾನ್ಸರ್ ಮೊದಲ ಲಕ್ಷಣ ಎಂದರೆ ಎದೆ ಅಥವಾ ಕಂಕುಳಿನ ಭಾಗದಲ್ಲಿ ಗಂಟುಗಳು ಕಾಣಿಸುತ್ತವೆ. ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಹಾಲುಣಿಸದ ತಾಯಂದಿರಲ್ಲಿ ಗಂಟುಗಳು ಕಾಣಿಸುತ್ತವೆ. ಆದರೆ ಇದು ಕ್ಯಾನ್ಸರ್ ಗಂಟು ಕೂಡ ಆಗಿರಬಹುದು. ಆಗಾಗ ನಿಮ್ಮ ಎದೆಯನ್ನು ಮುಟ್ಟಿ ಗಂಟುಗಳಿದ್ಯಾ ಪರೀಕ್ಷೆ ಮಾಡಿಕೊಳ್ಳಿ.
ಬೇರೆ ಲಕ್ಷಣಗಳೇನು?
- ಎದೆ ಅಥವಾ ಕಂಕುಳಿನ ಕೆಳಭಾಗ ಗಂಟಿನಂತೆ ಅನಿಸುತ್ತದೆ
- ಎದ ಭಾಗ ಊದಿಕೊಳ್ಳುವುದು
- ಎದೆ ಭಾಗದ ಚರ್ಮದಲ್ಲಿ ಇರಿಟೇಷನ್
- ನಿಪ್ಪಲ್ ಭಾಗ ಕೆಂಪಾಗುವುದು
- ನಿಪ್ಪಲ್ ಭಾಗ ನೋವು ಬರುವುದುಎದೆಯ ಬಣ್ಣ ಬದಲಾಗುವುದು
- ಎದೆಯ ಅಳತೆ ಬದಲಾಗುವುದು
- ನಿಪ್ಪಲ್ ಭಾಗದ ಚರ್ಮ ಕಿತ್ತು ಬರುವುದು
ಬ್ರೆಸ್ಟ್ ಕ್ಯಾನ್ಸರ್ ಬಾರದಂತೆ ತಡೆಗಟ್ಟುವುದು ಹೇಗೆ?
- ಆಲ್ಕೋಹಾಲ್ ಬಳಕೆಯಲ್ಲಿ ಮಿತಿಯಿರಲಿ
- ಆರೋಗ್ಯಕರ ತೂಕ ಇರಲಿ, ಹೆಚ್ಚು ದಪ್ಪ ಆಗಬೇಡಿ
- ದೈಹಿಕ ಚಟುವಟಿಕೆ ಇರಲಿ
- ಸೊಪ್ಪು, ಹಣ್ಣು ಹಾಗೂ ತರಕಾರಿ ಸೇವನೆ ಇರಲಿ
- ಧೂಮಪಾನ ಬೇಡ
- ಆರೋಗ್ಯಕರ ತೂಕ ನಿಮ್ಮದಾಗಿರಲಿ. ಅತಿಯಾದ ತೂಕದಿಂದ ಒಂದು ಲಾಭವೂ ಇಲ್ಲ.
- ದೈಹಿಕವಾಗಿ ಸಕ್ರಿಯರಾಗಿರಿ. ಕೂತಲ್ಲೇ ಕೂರುವುದು, ನಿಂತಲ್ಲೇ ನಿಲ್ಲುವುದು, ಸೋಂಬೇರಿತನ ಬೇಡ.
- ಸೊಪ್ಪು, ಮೊಳಕೆ ಕಾಳು. ತರಕಾರಿ, ಹಣ್ಣುಗಳು ಎಲ್ಲವನ್ನೂ ತಿನ್ನಿ. ಜಂಕ್ಫುಡ್, ಮದ್ಯಪಾನ ಬೇಡ.
- ಧೂಮಪಾನ ನಿಜ್ವಾಗಿಯೂ ಆರೋಗ್ಯಕ್ಕೆ ಹಾನಿಕರ. ಅದರಿಂದ ಒಂದಲ್ಲಾ ಒಂದು ಸಮಸ್ಯೆ ಗ್ಯಾರೆಂಟಿ.
- ಬಾಣಂತಿಯರು ಸೌಂದರ್ಯದ ಬಗ್ಗೆ ಗಮನ ಹರಿಸದೆ ಎದೆಹಾಲು ಉಣಿಸಿ. ಇದರಿಂದ ಸ್ತನ ಕ್ಯಾನ್ಸರ್ ಚಾನ್ಸ್ ಕಡಿಮೆ.
- ಬರ್ಥ್ ಕಂಟ್ರೋಲ್ ಮಾತ್ರೆಗಳ ಸೇವನೆ ಬೇಡ, ಅದರಲ್ಲೂ ನಿಮ್ಮ ವಯಸ್ಸು 35 ದಾಟಿದ್ದರೆ ಇದು ಹಾನಿಕಾರಕ.
- ಹಾರ್ಮೋನ್ಗಳ ಏರಿಳಿತ ಹೆಚ್ಚು ಕಡಿಮೆ ಆಗದಂತೆ ಗಮನ ವಹಿಸಿ. ಇದರಿಂದಲೂ ಸಮಸ್ಯೆ ತಪ್ಪಿದ್ದಲ್ಲ.
- ರೇಡಿಯೇಷನ್ಗಳಿಗೆ ಪದೇ ಪದೆ ಎಕ್ಸ್ಪೋಸ್ ಆಗಬೇಡಿ, ವಾತಾವರಣದ ಮಾಲಿನ್ಯದಿಂದಲೂ ದೂರ ಇರಿ.
- ಸರಿಯಾದ ವ್ಯಾಯಾಮ, ನಿದ್ದೆ ಕಡ್ಡಾಯ