ದಿಗಂತ ವರದಿ ವಿಜಯಪುರ:
ಡಿ.ಕೆ. ಶಿವಕುಮಾರ ಡಿನ್ನರ್ ಪಾರ್ಟಿ ಗೆ ಕೆಲ ಸಚಿವರು ಗೈರು ಎನ್ನುವುದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಟೆಂಡ್ ಆಗಿದ್ದೆ, ಫೋಟೋ ನೋಡಿದ್ದೀರಿ. ಸತೀಶ್ ಜಾರಕಿಹೊಳಿ, ಖಂಡ್ರೆ ರಾಜಣ್ಣ ಅಟೆಂಡ್ ಆಗಿದ್ದಾರೆ ಎಂದರು.
ಗೃಹ ಸಚಿವ ಜಿ. ಪರಮೇಶ್ವರ ಅವರ ಕ್ಷೇತ್ರದಲ್ಲಿ ಯಾರೋ ಮರಣ ಹೊಂದಿದ್ದರಂತೆ ಅಲ್ಲಿಗೆ ಹೋಗಿದ್ದರು. ಸುಮ್ಮ ಸುಮ್ಮನೆ ಸೃಷ್ಟಿ ಮಾಡ್ತೀರಿ ಎಂದರು.
ಸತೀಶ್ ಜಾರಕಿಹೊಳಿ ಅವರು ಬಂದಿದ್ದರು. ಸತೀಶ್ ಜಾರಕಿಹೊಳಿ, ರಾಜಣ್ಣ ಇಲ್ಲ ಅಂತ ಸೃಷ್ಟಿ ಮಾಡ್ತೀರಿ. ಪರಮೇಶ್ವರ ಅವರಿಗೆ ತುಂಬಾ ಹತ್ತಿರ ಇದ್ದವರು ತೀರಿಕೊಂಡಿದ್ದರು. ತೀರಿಕೊಂಡಾಗ ಇದು ಇಂಪಾರ್ಟೆಂಟ್ ಆಗುತ್ತಾ ? ಡಿನ್ನರ್ ಪಾರ್ಟಿಗೆ ಸಿದ್ದರಾಮಯ್ಯ ಅವರು ಬಂದಿದ್ದರು. ಇನ್ನೇನು ಬೇಕು ನಿಮಗೆ. ಪರಮೇಶ್ವರ ಬಿಟ್ಟು ಎಲ್ಲರೂ ಬಂದಿದ್ದರು ಎಂದರು. ಕಾಂಗ್ರೆಸ್ ನಲ್ಲಿ ಆಂತರಿಕ ಬೇಗುದಿ ವಿಚಾರಕ್ಕೆ, ಯಾವುದೇ ಆಂತರಿಕ ಬೇಗುದಿ ಇಲ್ಲ. ಇದರ ಮೇಲೆ ತಿಳಿದುಕೊಂಡು ಬಿಡಿ ಎಂದರು.