ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ 7 ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರಿಗೆ ವಿಧಿಸಲಾದ ನಿರ್ಬಂಧಗಳಿಗಿಂತ ಈ ಬಾರಿ ಪ್ರಯಾಣ ನಿರ್ಬಂಧಗಳು ಕಠಿಣವಾಗಿರುತ್ತವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಅಮೆರಿಕಕ್ಕೆ ಪ್ರಯಾಣ ನಿಷೇಧವನ್ನು ಎದುರಿಸುವ ಸಾಧ್ಯತೆ ಇರುವ 41 ದೇಶಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭೂತಾನ್ ಕೂಡ ಸೇರಿವೆ.
ಪಾಕಿಸ್ತಾನ ಮಾತ್ರವಲ್ಲದೆ ಈ ಗುಂಪಿನಲ್ಲಿರುವ ಇತರ ದೇಶಗಳಲ್ಲಿ ತುರ್ಕಮೆನಿಸ್ತಾನ್, ಬೆಲಾರಸ್, ಭೂತಾನ್ ಮತ್ತು ವನವಾಟು ಕೂಡ ಸೇರಿವೆ.
ನಿಷೇಧ ಹೇರಲ್ಪಡುವ ದೇಶಗಳ ಮೊದಲ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ ಮತ್ತು ಉತ್ತರ ಕೊರಿಯಾ ಸೇರಿದಂತೆ 10 ದೇಶಗಳಿವೆ.