ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಹಾಸ್ಯದ ಮಾತು ಜಗಳಕ್ಕೆ ತಿರುಗದಂತೆ ನೋಡಿ.  ಬೆನ್ನು ನೋವಿನಿಂದ ನಿರಾಳತೆ.
ವೃಷಭ
ಕೆಲಸದಲ್ಲಿ ಹೆಚ್ಚು ಎಚ್ಚರ ಬೇಕು. ತಪ್ಪಾಗದಂತೆ ನೋಡಿಕೊಳ್ಳಿ. ತಾಳ್ಮೆಯುತ ವರ್ತನೆಯಿಂದ ಬಿಕ್ಕಟ್ಟು ಪರಿಹರಿಸಿಕೊಳ್ಳುವಿರಿ. ಎಣ್ಣೆ ತಿಂಡಿ ದೂರಿವಿಡಿ.
ಮಿಥುನ
ನಿಮ್ಮ ಸುತ್ತ ಕೆಲವು ಮಹತ್ವದ ಬೆಳವಣಿಗೆ ಉಂಟಾದೀತು. ಅದರಿಂದ ನಿಮ್ಮ ಮೇಲೂ ಪರಿಣಾಮ ಆಗಲಿದೆ. ದೈಹಿಕ ಬಸವಳಿಕೆ ಹೆಚ್ಚಲಿದೆ.
ಕಟಕ
ಹಿನ್ನಡೆಗೆ ಅಂಜದಿರಿ. ವಿಶ್ವಾಸದಿಂದ ಕಾರ್ಯ ಎಸಗಿ. ನಿಮ್ಮ ಮೆಚ್ಚಿನ ವ್ಯಕ್ತಿಯನ್ನು ಭೇಟಿ ಆಗುವಿರಿ. ಖರೀದಿ, ಶಾಪಿಂಗ್ ಉತ್ಸಾಹ.
ಸಿಂಹ
ಪ್ರೀತಿಪಾತ್ರರು ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ ವರ್ತಿಸಿಯಾರು. ಅವರನ್ನು ದೂರಬೇಡಿ. ಕಾರಣ ತಿಳಿದು ಪರಿಹಾರ ಕಂಡುಕೊಳ್ಳಿ.
ಕನ್ಯಾ
ಆಶಾವಾದದಿಂದ ದಿನ ಆರಂಭಿಸಿ. ಬೆಳಗ್ಗೆಯೆ ನಿರಾಶಾವಾದಕ್ಕೆ ಅವಕಾಶ ಕೊಡಬೇಡಿ. ಇಷ್ಟ ಇಲ್ಲದಿದ್ದರೂ ಕೆಲವರ ಜತೆ ಹೊಂದಾಣಿಕೆ ಸಾಽಸಿರಿ.
ತುಲಾ
ಹೊಸ ವ್ಯಕ್ತಿಯ ಜತೆ ಗೆಳೆತನ ಬೆಳೆಯಲಿದೆ. ಇದು ಉಲ್ಲಾಸ ತುಂಬಲಿದೆ. ಸಂಘಟಿತ ಕಾರ್ಯದಿಂದ ಯಶಸ್ಸು.      ಹೂಡಿಕೆಯಿಂದ ಲಾಭ.
ವೃಶ್ಚಿಕ
ಸಹೋದ್ಯೋಗಿಗಳ ಜತೆ ಸಹಕಾರ ಇರಲಿ. ಖರ್ಚು ಅಽಕ. ಖರ್ಚು ತಗ್ಗಿಸಲು ಶಾಪಿಂಗ್‌ಗೆ ಕಡಿವಾಣ ಹಾಕಿ. ಇಷ್ಟದ ವ್ಯಕ್ತಿಯ ಜತೆ ಸಂವಾದ.
ಧನು
ಸಾಮಾಜಿಕ ಚಟುವಟಿಕೆ ಹೆಚ್ಚು. ಇದರಿಂದ ನಿಮ್ಮ ಮನಸ್ಸು ನಿರಾಳವಾಗಲಿದೆ. ಅವಘಡದಿಂದ ಸಣ್ಣ ಗಾಯವಾಗುವ ಸಂಭವ.
ಮಕರ
ಯಾವುದೇ ಕಾರ್ಯ ವೇಗವಾಗಿ ಮುಗಿಸಲು ಬಯಸಿದರೂ ಅದು ಸಾಧ್ಯವಾಗದು. ಎಲ್ಲವೂ ವಿಳಂಬವಾಗಲಿದೆ. ಬಂಧುಗಳ ಕಿರಿಕಿರಿ.
ಕುಂಭ
ಖಾಸಗಿ ಸಮಸ್ಯೆ ಕಿರಿಕಿರಿ ಸೃಷ್ಟಿಸೀತು. ಸಣ್ಣ ವಿಷಯದಲ್ಲೂ  ತಪ್ಪು ಹುಡುಕುವ ಅಭ್ಯಾಸ ಬಿಡಿ. ಅದರಿಂದ ಮನೆಯ ಶಾಂತಿ ಕಲಕಬಹುದು.
ಮೀನ
ಹರ್ಷ ತರುವ ವಿಷಯದತ್ತ ಗಮನ ಹರಿಸಿ. ಬೇಸರದ ವಿಷಯ ಮರೆಯಲು ಯತ್ನಿಸಿ. ಆರೋಗ್ಯ ಸಮಸ್ಯೆ ಪರಿಹಾರ, ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!