ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಮನೆಯಲ್ಲಿ ಇಂದು ಮೊಮ್ಮಗನ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ. ಖಾಸಗಿ ಹೋಟೆಲ್ನಲ್ಲಿ ಮಗುವಿನ ನಾಮಕರ ಸಮಾರಂಭ ನಡೆಯಲಿದ್ದು, ಹಲವು ಗಣ್ಯರು ಆಗಮಿಸಲಿದ್ದಾರೆ. ನಟ ದರ್ಶನ್ ಸಹ ಆಗಮಿಸುವ ನಿರೀಕ್ಷೆ ಇದೆ.
ಸುಮಲತಾ ಅಂಬರೀಶ್, ಅಭಿಷೇಕ್ ಮತ್ತು ಅವಿವಾ ಅಭಿಷೇಕ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅನ್ಫಾಲೋ ಮಾಡಿದ್ದರು. ಅಂಬರೀಶ್ ಕುಟುಂಬದ ಮೇಲೆ ಮುನಿಸು ಇದೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿಯ ಮುನಿಸು ಯಾವುದೂ ಇಲ್ಲ ಅಂತ ಸುಮಲತಾ ಅಂಬರೀಶ್ ಸ್ಪಷ್ಟ ಪಡಿಸಿದ್ದಾರೆ. ಯಾವತ್ತಿದ್ದರೂ ದರ್ಶನ್ ಮನೆಮಗ ಅಂತಾನೂ ಹೇಳಿದ್ದಾರೆ.
ಅಭಿಷೇಕ್ ಮತ್ತು ಅವಿವಾ ದಂಪತಿಯ ಮಗುವಿನ ನಾಮಕರಣಕ್ಕೆ ಮನೆಮಗ ದರ್ಶನ್ ಬರ್ತಾರಾ? ಬರಲ್ವಾ ಅನ್ನೋದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.