ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ವರ್ಷದ ಬಾಲಕಿ ಮೇಲೆ ಮೂರು ಬೀದಿನಾಯಿಗಳಿಂದ ಭೀಕರ ದಾಳಿ ಮಾಡಿರುವಂತಹ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ನಡೆದಿದೆ.
ಪ್ರಾವೀಣ್ಯಾ ಬೋಯರ್ ನಾಯಿ ದಾಳಿಗೊಳಗಾದ ಬಾಲಕಿ. ಹೊಟ್ಟೆ, ಬೆನ್ನು, ಕಾಲಿಗೆ ಬೀದಿ ನಾಯಿಗಳು ಕಚ್ಚಿದ್ದು, ಗಂಭೀರ ಗಾಯಗೊಂಡಿರುವ ಬಾಲಕಿಗೆ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ.
ನಿನ್ನೆಯಷ್ಟೇ ಇದೇ ಕಾಲೋನಿಯಲ್ಲಿ ಓರ್ವ ಬಾಲಕನಿಗೆ ನಾಯಿ ಕಚ್ಚಿದೆ. ಸದ್ಯ ನಾಯಿಗಳ ಕಾಟ ತಪ್ಪಿಸದ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.