ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಬಿಡದಿಯ ಕೇತಗಾನಹಳ್ಳಿ ಸರ್ವೇ ನಂ. 7, 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಭೂ ಒತ್ತುವರಿ ಆರೋಪ ಹಿನ್ನೆಲೆ ಇಂದಿನಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಇತ್ತ ಭೂ ದಾಖಲೆಗಳ ಇಲಾಖೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ರಾಮನಗರದ ಭೂ ದಾಖಲೆಗಳ ಸಹಾಯ ನಿರ್ದೇಶಕರಿಗೆ ಪತ್ರ ಬರೆದಿರುವ ಹೆಚ್‌ಡಿಕೆ, ಕಾನೂನು ಬಾಹಿರವಾಗಿ ಹೆಚ್ಚುವರಿ ಜಮೀನು ನನ್ನಲ್ಲಿದ್ದರೆ, ಅದನ್ನ ವಶಕ್ಕೆ ತೆಗೆದುಕೊಳ್ಳಬಹುದು. ಹಾಗೆಯೇ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.7ರಲ್ಲಿ ತಪ್ಪಿ ಹೋಗಿರುವ ನನ್ನ ಜಮೀನುನನ್ನು ಹುಡುಕಿಕೊಡಿ ಎಂದು ಆಗ್ರಹಿಸಿದ್ದಾರೆ.
ರಾಮನಗರ ತಾಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ವೇ ನಂ. 7, 8, 9, 10, 16, 17 ಮತ್ತು 79ರಲ್ಲಿ ಭೂ ಒತ್ತುವರಿ ಆಗಿದ್ದರೆ, ಸರ್ವೇ ನಡೆಸಿ ವರದಿ ನೀಡುವಂತೆ ರಾಜ್ಯ ಗೌರವಾನ್ವಿತ ಹೈಕೋರ್ಟ್ ನಿರ್ದೇಶನ ನೀಡಿರುವುದು ಸರಿಯಷ್ಟೇ. ಕೋರ್ಟ್ ಆದೇಶದಂತೆಯೇ ಸಮೀಕ್ಷಾ ತಂಡ ಕಳೆದ ಫೆ.18ರಂದು ಮಂಗಳವಾರ ಎಲ್ಲಾ ಸರ್ವೇ ನಂಬರ್ ಜಾಗದಲ್ಲಿಯೂ ಸಮೀಕ್ಷೆ ನಡೆಸಿದೆ.
ಸರ್ವೇ ನಂ. 7 ರಲ್ಲಿ ನಾನು 5 ಎಕರೆ 20 ಗುಂಟೆ ಜಮೀನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನಿನಲ್ಲಿ ಮಾತ್ರ ನನ್ನ ಅನುಭವದಲ್ಲಿದೆ. ಈ ಜಮೀನನ್ನು ಕೇತಗಾನಹಳ್ಳಿ ಗ್ರಾಮದವರಿಂದಲೇ ಖರೀದಿ ಮಾಡಿದ್ದು. ಉಳಿದ ಜಮೀನನ್ನು ತಾವು ಹುಡುಕಿಕೊಡುವಂತೆ ಮನವಿ ಮಾಡುತ್ತೇನೆ ಎಂದು ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರದಲ್ಲಿ ತಿಳಿಸಿದ್ದಾರೆ.