ನೆತ್ತಿ ಮೇಲೆ ಸೂರ್ಯ ಆಗಮಿಸಿದ್ದಾನೆ. ಬೆಳಗ್ಗೆ ಗಂಟೆ ಎಂಟರಿಂದಲೇ ಬಿಸಿಲಿನ ಧಗೆ ಆಗುತ್ತಿದ್ದು, ಗಿಡಗಳು ಬಿಸಿಲಿಗೆ ಬಾಡಿ ಹೋಗುತ್ತಿವೆ. ಈ ಸಮಯದಲ್ಲಿ ಗಿಡಗಳ ಆರೈಕೆ ಹೀಗೆ ಮಾಡಿ..
ಈ ಬೇಸಿಗೆಯಲ್ಲಿ ಸೂರ್ಯ ಕಿರಣಗಳು ಪ್ರಕಾಶಮಾನವಾಗಿರುತ್ತವೆ. ಈ ಋತುವಿನಲ್ಲಿ ಗಿಡಗಳು ಬಾಡಲು ಅಥವಾ ಜೀವ ಕಳೆದುಕೊಳ್ಳಲು ಮುಖ್ಯ ಕಾರಣ ಅವುಗಳಿಗೆ ಸಮರ್ಪಕವಾಗಿ ನೀರು ಹಾಕದೇ ಇರುವುದು. ಹೀಗಾಗಿ ಸಸ್ಯಗಳಿಗೆ ನಿಯಮಿತವಾಗಿ ನೀರುಣಿಸುವುದನ್ನು ಖಚಿತಪಡಿಸಿಕೊಳ್ಳಿ.
ಸಾಮಾನ್ಯವಾಗಿ ಈ ರಸಗೊಬ್ಬರ ಗಿಡಗಳ ಬೆಳವಣಿಗೆಯನ್ನು ಪ್ರಚೋದಿಸುತ್ತೇನೋ ನಿಜ. ಆದರೆ ಈ ಬೇಸಿಗೆಯಲ್ಲಿ ಗಿಡಗಳಿಗೆ ರಸಗೊಬ್ಬರವನ್ನು ಹೀರಿಕೊಳ್ಳಲು ಸಾಧ್ಯವಾಗಲ್ಲ. ಸುಡುವ ಬಿಸಿಲಿನಲ್ಲಿ ರಸಗೊಬ್ಬರ ಹಾಕಿದರೆ ಗಿಡಗಳು ಸಾಯುತ್ತವೆ. ಅದಲ್ಲದೆ ಗಿಡಗಳ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕಿದಂತಾಗುತ್ತದೆ,ಹೀಗಾಗಿ ಸಾಧ್ಯವಾದಷ್ಟು ಈ ಬೇಸಿಗೆ ಋತುವಿನಲ್ಲಿ ರಸ ಗೊಬ್ಬರ ಬಳಕೆ ಮಾಡುವುದನ್ನು ತಪ್ಪಿಸಿ.
ಬೇಸಿಗೆ ಆರಂಭವಾಗುತ್ತಿದ್ದಂತೆ ಹೂವಿನ ತೋಟ ಅಥವಾ ಕೈ ತೋಟದ ಆರೈಕೆಯತ್ತ ಗಮನ ಕೊಡುವುದು ಮುಖ್ಯ. ಈ ವೇಳೆಯಲ್ಲಿ ಗಿಡದ ಮಣ್ಣನ್ನು ಸಡಿಲ ಮಾಡಿ, ಹೀಗೆ ಮಾಡಿದ್ರೆ ಬೇರುಗಳಿಗೆ ಗಾಳಿಯಾಡುತ್ತದೆ. ಪ್ರಾರಂಭದಲ್ಲಿಯೇ ಮಣ್ಣಿಗೆ ಸಾವಯವ ಗೊಬ್ಬರ ಸೇರಿಸಿದ್ರೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ.
ಝಳ ಝಳ ಬಿಸಿಲಿನಲ್ಲಿ ಶಾಖವನ್ನು ತಾಳಿಕೊಳ್ಳಲು ಗಿಡಗಳಿಗೆ ಹಾಗೂ ಬಳ್ಳಿಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ಬಿಸಿಲು ಬೀಳುವ ಸ್ಥಳದಲ್ಲಿರುವ ಗಿಡ ಹಾಗೂ ಬಳ್ಳಿಗಳನ್ನು ನೆರಳಿರುವ ಸ್ಥಳದಲ್ಲಿಡಿ. ಇದರಿಂದ ಸೂರ್ಯನ ಕಿರಣಗಳು ಗಿಡಗಳ ಮೇಲೆ ನೇರವಾಗಿ ಬೀಳದಂತೆ ತಡೆಯಬಹುದು.