ACCIDENT | ಭೀಕರ ಅಪಘಾತ, ದೇಹದಿಂದ ಹೊರಬಂದು ರಸ್ತೆಯಲ್ಲಿ ಬಡಿದುಕೊಳ್ಳುತ್ತಿತ್ತು ಬೈಕ್‌ ಸವಾರನ ಹೃದಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಕುಳಿತಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ರಾಯಚೂರಿನಲ್ಲಿ ನಡೆಯಿತು. ನಗರದ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್‌ಗೆ ರಸ್ತೆ ಸಂಪರ್ಕ ಕಲ್ಪಿಸುವ ಸ್ಟೇಷನ್​ ರಸ್ತೆಯಲ್ಲಿನ ಶ್ರೀರಾಮಮಂದಿರ ಬಳಿ ಈ ಅವಘಡ ಸಂಭವಿಸಿದೆ.

ಉತ್ತರ ಪ್ರದೇಶ ನಿವಾಸಿ ಸುರೇಶ್ ​(35) ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಇವರ ಮಗ ಬಾಲಕ ಶುಭಂ ಅವರ ಕಾಲು ಮುರಿದಿದೆ. ಸುರೇಶ್ ಗ್ರಾನೈಟ್ ಕೆಲಸ ಮಾಡುತ್ತಿದ್ದರು. ರಾಯಚೂರಿಗೆ ಗ್ರಾನೈಟ್ ಕೆಲಸಕ್ಕಾಗಿ ಬಂದಿದ್ದರು. ನಿನ್ನೆ‌‌ ರಾತ್ರಿ ಬೈಕ್​ನಲ್ಲಿ ಸ್ಟೇಷನ್‌ ರಸ್ತೆ ಮೂಲಕ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುರೇಶ್​ ಅವರ ಹೃದಯ ಹೊರಬಂದು ರಸ್ತೆಯಲ್ಲಿ ಬಡಿದುಕೊಳ್ಳುತ್ತಿತ್ತು. ದೇಹದ ಅಂಗಾಂಗಗಳು ಛಿದ್ರವಾಗಿ ಬಿದ್ದಿದ್ದವು. ಈ ದೃಶ್ಯ ಕರುಳು ಹಿಂಡುವಂತಿತ್ತು.

ರಾಯಚೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಗಾಯಾಳು ಬಾಲಕನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!