ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನುನೋಡಿಕೊಳ್ಳದಿದ್ದರೆ ಹೆತ್ತವರು ತಮ್ಮ ಮಕ್ಕಳ ಹೆಸರಿನಲ್ಲಿ ಮಾಡಿರುವ ಆಸ್ತಿಯನ್ನು ಹಿಂಪಡೆಯಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಮಕ್ಕಳು ಅಥವಾ ಸಂಬಂಧಿಕರು ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿಂದ ಅವರ ಹೆಸರಿನಲ್ಲಿ ಗಿಫ್ಟ್ ಡೀಡ್ ಮಾಡಿ, ಆ ಬಳಿಕ ಅವರು ನೋಡಿಕೊಳ್ಳದೇ ಇದ್ದಲ್ಲಿ ಅದನ್ನು ರದ್ದುಪಡಿಸಬಹುದು. ಗಿಫ್ಟ್ ಡೀಡ್‌ನ ದಾಖಲೆಯಲ್ಲಿ ಸ್ಪಷ್ಟವಾಗಿ ಹೇಳಿರದಿದ್ದರೂ ರದ್ದು ಪಡಿಸುವ ಹಕ್ಕು ಆಸ್ತಿ ಕೊಟ್ಟವರಿಗೆ ಇದೆ ಎಂದು ತೀರ್ಪು ನೀಡಿದೆ.
ಆಸ್ತಿ ವರ್ಗಾವಣೆಗೊಂಡವರು ಭರವಸೆ ನೀಡಿ, ಆರೈಕೆ ಮಾಡದಿದ್ದರೆ ಹಿರಿಯ ನಾಗರಿಕರು ವರ್ಗಾವಣೆಯನ್ನು ರದ್ದುಗೊಳಿಸಲು ಸೆಕ್ಷನ್ 23(1) ಅನ್ನು ಅನ್ವಯಿಸಬಹುದು ಎಂದು ಪೀಠವು ತಿಳಿಸಿದೆ.