ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಹುನಗುಂದ ಗ್ರಾಮದಲ್ಲಿ ಮಾವನೊಬ್ಬ ಸೊಸೆಗೆ ಕಿರುಕುಳ ನೀಡಿ ಸೊಸೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಹುನಗುಂದ ಗ್ರಾಮದ ಕಾವೇರಿ(೨೨) ಎಂಬಾತ ಮಹಿಳೆಯಾಗಿದ್ದು ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಕಾವೇರಿಯನ್ನು ಹುನಗುಂದ ಗ್ರಾಮದ
ಮಂಜುನಾಥ ಬೆಟದೂರ ಎಂಬವರಿಗೆ ಮದುವೆ ಮಾಡಿಲಾಗಿತ್ತು. ಆದರೆ ಗಂಡನ ತಂದೆ ಯಲ್ಲಪ್ಪ ಹಾಗೂ ಅತ್ತೆ ಶಾಂತವ್ವಾ ಎಂಬುವರು ಕಾವೇರಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ , ವರದಕ್ಷಿಣೆ ಕಿರುಕುಳ ನೀಡಿ ೫ ಗ್ರಾಂ ಬಂಗಾರ ಹಾಗೂ ಎಂಬತೈದು ಸಾವಿರ ರೂಪಾಯಿ ಹಣವನ್ನು ತವರು ಮನೆಯಿಂದ ತರಿಸಿಕೊಂಡಿದಲ್ಲದೆ ಮಾವ ಯಲ್ಲಪ್ಪ ಫೆ ೧೬ರಂದು ಕಾವೆರಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಈ ಹಿಂದೆಯೂ ಗದ್ದೆಯಲ್ಲಿ ಹಲವು ಬಾರಿ ಅತ್ಯಾಚಾರ ಮಾಡಿದ್ದು ಈ ಕುರಿತು ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಕಾವೇರಿಯ ತಂದೆ ನಿಂಗಪ್ಪ ಮೇಣಸಗಿ ಎಂಬವರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.