ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಜಲದಿನದ ಅಂಗವಾಗಿ ಮಲ್ಲೇಶ್ವರದ ಸ್ಯಾಂಕಿ ಕೆರೆ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ʻಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು.
ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಕಾವೇರಿ ಆರತಿ ನಡೀತು. ಮಲ್ಲೇಶ್ವರದ ಹೃದಯ ಭಾಗದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಕಾವೇರಿ ತಾಯಿಗೆ ಗೌರವ ಸೂಚಿಸಲಾಯಿತು. ಭಾಗಮಂಡಲದಿಂದ ತಂದ ಕಾವೇರಿ ಜಲಕ್ಕೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು.
ಇದೇ ವೇಳೆ, ಗಂಗಾ ದೇವಿಗೆ ಹೋಮ ಸಲ್ಲಿಸಲಾಯಿತು. ಬಳಿಕ 108 ಕಲಶಗಳೊಂದಿಗೆ ಮೆರವಣಿಗೆ ಮೂಲಕ ಸ್ಯಾಂಕಿ ಕೆರೆಗೆ ತರಲಾಯಿತು. ಕಾವೇರಿ ಮಾತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ವಿಶ್ವ ಜಲದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಸ್ಯಾಂಕಿ ಕೆರೆಯ ತೇಲುವ ವೇದಿಕೆಯಲ್ಲಿ ವಾರಾಣಸಿಯ ಪ್ರಸಿದ್ಧ ತಂಡದಿಂದ ಕಾವೇರಿ ಆರತಿ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿತು. ಗಾಯಕಿ ಅನನ್ಯಾ ಭಟ್, ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದರೆ, 3ಡಿ ಮ್ಯಾಪಿಂಗ್ ಮಾದರಿಯಲ್ಲಿ ವಿದ್ಯುತ್ ಅಲಂಕಾರ ಇತ್ತು.