ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಈ ದಿನ ನಿಮ್ಮ  ನಿರೀಕ್ಷೆ ಅಪಾರ. ಆದರೆ ಅದೆಲ್ಲ ಸಾಕಾರವಾಗದು. ತುಸು ನಿರಾಶೆಯೂ ಕಾದಿದೆ. ಬಂದದ್ದನ್ನು ಸ್ವೀಕರಿಸುವುದೊಳಿತು.
ವೃಷಭ
ವ್ಯವಹಾರದಲ್ಲಿ ಹಲವು ಅವಕಾಶ ಕಣ್ಣಮುಂದಿದೆ. ಉತ್ತಮ ವಾದುದನ್ನು ಆರಿಸಿ. ಕೌಟುಂಬಿಕ ಸಮಾಧಾನ. ಚರ್ಮದ ಕಾಳಜಿ ವಹಿಸಿ.
ಮಿಥುನ
ಬಾಕಿ ಉಳಿದಿದ್ದ ಕಾರ್ಯ ಸಂಪೂರ್ಣ. ಆರ್ಥಿಕ ಲಾಭ. ನಿಮ್ಮ ಕಾರ್ಯಕ್ಕೆ ಕುಟುಂಬ ಸದಸ್ಯರ ಬೆಂಬಲ. ನೆರೆಕರೆ ಜತೆ ಜಗಳ ಸಂಭವ.
ಕಟಕ
ಮನೆ ಅಥವಾ ಕಚೇರಿಯಲ್ಲಿ ವಿನಯ ದಿಂದ ಮಾತನಾಡಿ. ವ್ಯಗ್ರ ಮಾತು ವಿಕೋಪಕ್ಕೆ ಕಾರಣವಾದೀತು. ಸಂಜೆ ವೇಳೆ ನೆಮ್ಮದಿ.
ಸಿಂಹ
ಸಹಕಾರ ಮತ್ತು ಹೊಂದಾಣಿಕೆಯಿಂದ ನಿಮ್ಮ ಕೆಲಸ ಸಾಧಿಸಿರಿ. ಅನವಶ್ಯ ಜಗಳ, ವಾಗ್ವಾದ ಬೇಡ. ಅಜೀರ್ಣದಂತಹ ಸಮಸ್ಯೆ ಕಾಡೀತು.
ಕನ್ಯಾ
ಸಹೋದ್ಯೋಗಿ ಜತೆ ಕಠಿಣವಾಗಿ ವರ್ತಿಸಿರಿ. ನಿಮ್ಮ ಸಲುಗೆಯನ್ನು ದುರುಪಯೋಗ ಮಾಡದಂತೆ ನೋಡಿಕೊಳ್ಳಿ. ಆರ್ಥಿಕ ಬಿಕ್ಕಟ್ಟು.
ತುಲಾ
ಸತತ ಪ್ರಯತ್ನದಿಂದ ನಿಮ್ಮ ಬಹುಕಾಲದ ಉದ್ದೇಶ ಸಾಧಿಸುವಿರಿ.  ವಿರೋಧವನ್ನು ಲೆಕ್ಕಿಸಬೇಡಿ. ಆಪ್ತರ ಸಂಗದಲ್ಲಿ  ನೆಮ್ಮದಿ.
ವೃಶ್ಚಿಕ
ನಿಮ್ಮ ಮೇಲೆ ವಿಶ್ವಾಸವಿಡಿ. ಯಶಸ್ಸು ಖಂಡಿತ. ಮಾಡುವ ಕೆಲಸದ ಬಗ್ಗೆ ಆರಂಭದಲ್ಲೆ ಅನುಮಾನ ಬೇಡ. ಆಪ್ತರಿಂದ ಬೇಸರ.
ಧನು
ಹೊಸ ವ್ಯವಹಾರ ಪೂರ್ಣ ಸ-ಲತೆ ಕಾಣದು.ಬದಲಾವಣೆ ಬೇಕಾದೀತು. ಆತ್ಮೀಯರ ಹಿತವಚನ ಕೇಳಿ. ಕೌಟುಂಬಿಕ ಅಶಾಂತಿ.
ಮಕರ
ಫಲಪ್ರದ ದಿನ. ಸಕಾರಾತ್ಮಕ ದೃಷ್ಟಿಕೋನ ಉತ್ತಮ ಫಲ ನೀಡಲಿದೆ. ಇತರರ ಟೀಕೆಯಲ್ಲೆ ಕಾಲ ಕಳೆಯಬೇಡಿ. ಅವರನ್ನು ನಿರ್ಲಕ್ಷಿಸಿರಿ.
ಕುಂಭ
ನಿಮ್ಮ ಕೆಲಸಕ್ಕೆ ಭಂಗ ತರಲು ಕೆಲವರ ಯತ್ನ. ಹೊರಗಿನ ವ್ಯವಹಾರದಲ್ಲಿ ಹೊಣೆಯಿಂದ ವರ್ತಿಸಿ.    ನಿಮ್ಮ ದೌರ್ಬಲ್ಯ ಅನ್ಯರಿಗೆ ಕಂಡುಬರದಿರಲಿ.
ಮೀನ
ವಿಶೇಷ ಘಟಿಸದ ಸಾಮಾನ್ಯ ದಿನ. ಮಧುಮೇಹಿಗಳು ಆಹಾರದ ಬಗ್ಗೆ ಜಾಗ್ರತೆ ವಹಿಸಿ. ಹೊಸ ಹೂಡಿಕೆಗೆ ಮನ ಮಾಡುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!