ಯಾಕೋ ಕ್ರಿಯೇಟೀವ್ ಐಡಿಯಾಗಳು ಬರುತ್ತಿಲ್ಲ, ಮೈಂಡ್ ತುಕ್ಕು ಹಿಡಿದ ಹಾಗೆ ಅನಿಸ್ತಿದೆ ಅಂದ್ರೆ ತಪ್ಪದೇ ಈ ಕೆಲಸಗಳನ್ನು ಮಾಡಿ. ಇವುಗಳು ನಿಮ್ಮ ಬ್ರೈನ್‌ಗೆ ಫುಡ್ ಇದ್ದಂತೆ. ಮೆದುಳು ಚುರುಕಾಗಿರಲು ಈ ಕೆಲಸ ಮಾಡಿ..
ಮೆದುಳಿಗೆ ಹೊಸದನ್ನು ಕಲಿಯಬೇಕು ಎಂದರೇ ಇಷ್ಟ. ಹೀಗಾಗಿ ಹೊಸ ಭಾಷೆಗಳು, ಮ್ಯೂಸಿಕ್, ಸಾಂಗ್ಸ್ ಅನ್ನು ಕೇಳುವುದರ ಜೊತೆ ಜೊತೆಗೆ ಹೇಗೆ ಸಂಯೋಜನೆ ಮಾಡುವುದೆಂದು ಕಲಿಯುತ್ತಿದ್ದರೇ ನಿಮ್ಮ ಜ್ಞಾನ ವಿಸ್ತರಿಸುತ್ತದೆ.
ನಿಯಮಿತ ಧ್ಯಾನವು ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಒತ್ತಡ, ಆತಂಕ, ಖಿನ್ನತೆ ಕಡಿಮೆ ಮಾಡುತ್ತದೆ. ಇದು ಶಾಂತತೆಯನ್ನು ಉತ್ತೇಜಿಸುತ್ತದೆ. ಸ್ಮರಣೆಯನ್ನು ಸುಧಾರಿಸಿ ಮೆದುಳಿನ ಕಾರ್ಯ ಹೆಚ್ಚಿಸುತ್ತದೆ.
ಮೆದುಳು ಕ್ರಿಯಾಶೀಲವಾಗಿರಲು ಸದಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಸಂಬಂಧಿಕರ ಅಥವಾ ಸ್ನೇಹಿತರೊಂದಿಗೆ ಬೆಳಗ್ಗೆ, ಸಂಜೆ ವಾಕ್ ಮಾಡುವುದು ಉತ್ತಮ.
ವಿಡಿಯೋ ಗೇಮ್ಸ್ ಹಾಗೂ ಮೊಬೈಲ್ನಲ್ಲಿ ಗೇಮ್ಸ್ ಆಡುವುದರಿಂದ ಮೆದುಳನ್ನು ಸಕ್ರಿಯಗೊಳಿಸಬಹುದು. ಆದ್ರೆ ಇದನ್ನು ತೀವ್ರ ಮಿತಿಯಲ್ಲಿ ಆಡಬೇಕು. ಗೇಮ್ಸ್ಗೆ ಅಡಿಕ್ಟ್ ಆಗಬಾರದು.
ದೇಹದಂತೆ ಮೆದುಳಿಗೆ ವಿಶ್ರಾಂತಿ ಬೇಕೇ ಬೇಕು. ಹೆಚ್ಚು ನಿದ್ದೆ ಮಾಡುವುದರಿಂದ ಮೆದುಳನ್ನು ರೀಚಾರ್ಜ್ ಮಾಡಬಹುದು.
ಚೆಸ್, ಕೇರಂ, ಟೇಬಲ್ ಟೆನ್ನಿಸ್, ಸೆಟ್ಲ್ ಕಾಕ್, ಖೋ ಖೋನಂತಹ ಆಟಗಳನ್ನು ಆಡುವುದರಿಂದ ಮೆದುಳು ಆರೋಗ್ಯವಾಗಿರುತ್ತೆ.
ನಾವು ನಿತ್ಯ ಯಾವುದಾದ್ರೂ ವಿಷಯಕ್ಕೆ ನಗುವುದರಿಂದ ಮೆದುಳನ್ನು ತಾಜಾ ಮತ್ತು ಆರೋಗ್ಯಕರವಾಗಿ ಇಡಬಹುದು.