ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಐಪಿಎಲ್ ನಲ್ಲಿ ಬಿಸಿಸಿಐ ಹಲವಾರು ದೊಡ್ಡ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳು ಆಟಗಾರರ ಮೇಲೆ ಹಾಗೂ ಪ್ರೇಕ್ಷಕರ ಮೇಲೆ ಯಾವ ರೀತಿಯ ಪರಿಣಾಮಗಳು ಬೀಳಲಿವೆ ಎಂದು ಕಾದು ನೋಡಬೇಕಷ್ಟೆ. ಆ ಬದಲಾವಣೆಗಳು ಯಾವುದೆಲ್ಲಇಲ್ಲಿದೆ ನೋಡಿ.
ಬಾಲ್ ಗೆ ಎಂಜಲು ಹಚ್ಚುವುದರ ಮೇಲೆ ಇದ್ದ ಬ್ಯಾನ್ ರದ್ದು
ಕೋವಿಡ್ ಅವಧಿಯಲ್ಲಿ ಜಾರಿಗೆ ತಂದ ಎಂಜಲು ಬ್ಯಾನ್ ಅನ್ನು ಈಗ ತೆಗೆದು ಹಾಕಲಾಗಿದೆ.
ಸೆಕೆಂಡ್ ಬಾಲ್ ನಿಯಮ ಜಾರಿ
ಈಗ ಸೆಕೆಂಡ್ ಬಾಲ್ ನಿಯಮ ಜಾರಿಗೆ ಬಂದಿದೆ. ಸಂಜೆ ಪಂದ್ಯಗಳ ವೇಳೆ ಎರಡನೇ ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ಚೆಂಡನ್ನು ಬದಲಾಯಿಸಬಹುದು ಎಂದು ಬಿಸಿಸಿಐ ತಿಳಿಸಿದೆ.
ಆಟದ ನಡುವೆ ಆಟಗಾರರ ಬದಲಾವಣೆ
ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಐಪಿಎಲ್ 2025ರಲ್ಲಿ ಮುಂದುವರೆಯಲಿದೆ. ಈ ನಿಯಮದ ಪ್ರಕಾರ ತಂಡಗಳು ಯಾವುದೇ ಸಮಯದಲ್ಲಿ ಆಟಗಾರರನ್ನು ಬದಲಾಯಿಸಬಹುದಾಗಿದೆ.
ವೈಡ್ ಮತ್ತು ನೋಬಾಲ್ ಗೆ ಡಿ ಆರ್ ಎಸ್ ಲಭ್ಯ
ಇನ್ನು ಮುಂದೆ ಡಿ ಆರ್ ಎಸ್ ಅನ್ನು ಔಟ್ ಅಥವಾ ಎಲ್ ಬಿಡಬ್ಲ್ಯೂ ಗೆ ಮಾತ್ರವಲ್ಲದೆ ವೈಡ್ ಮತ್ತು ನೋಬಾಲ್ ಗಳಲ್ಲಿ ಬಳಸಲಾಗುತ್ತದೆ.
ನಿಧಾನ ಗತಿಯ ಓವರ್ ರೇಟ್ ಗೆ ನಾಯಕನಿಗೆ ದಂಡ
ನಿಧಾನ ಗತಿಯ ಓವರ್ ರೇಟ್ ಬಗ್ಗೆ ಈಗ ತಂಡದ ನಾಯಕರು ಅಮಾನತುಗೊಳ್ಳುವ ಭಯ ಇರುವುದಿಲ್ಲ. ಯಾಕಂದ್ರೆ ಈ ಬಾರಿ ಫೈನ್ ಹಾಕಲಾಗುತ್ತೆ.