Thursday, January 29, 2026
Thursday, January 29, 2026
spot_img

ಅಜಿತ್ ಪವಾರ್ ವಿಮಾನ ಅಪಘಾತ: Plane Crash ಸ್ಥಳದಲ್ಲಿ ‘Black Box’ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನ ದೇಶದ ರಾಜಕೀಯ ವಲಯವನ್ನು ಶೋಕದಲ್ಲಿ ಮುಳುಗಿಸಿದೆ. ಅವರು ಪ್ರಯಾಣದಲ್ಲಿದ್ದ ವಿಮಾನ ಅಪಘಾತಕ್ಕೀಡಾಗಲು ನಿಖರ ಕಾರಣವೇನು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದ್ದು, ಅಪಘಾತಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ ಎನ್ನಲಾಗಿದೆ.

ಗುರುವಾರ ಬಾರಾಮತಿ ಸಮೀಪ ಅಪಘಾತ ಸಂಭವಿಸಿದ ಸ್ಥಳಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮತ್ತು ವಿಧಿವಿಜ್ಞಾನ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಈ ವೇಳೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆ ದೊರೆತಿದ್ದು, ತನಿಖಾಧಿಕಾರಿಗಳು ಡಿಕೋಡಿಂಗ್ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದನ್ನೂ ಓದಿ:

ಬ್ಲ್ಯಾಕ್ ಬಾಕ್ಸ್‌ನಲ್ಲಿ ಫ್ಲೈಟ್ ಡೇಟಾ ರೆಕಾರ್ಡರ್ ಹಾಗೂ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂಬ ಎರಡು ಪ್ರಮುಖ ಘಟಕಗಳಿದ್ದು, ವಿಮಾನದ ತಾಂತ್ರಿಕ ಮಾಹಿತಿ ಮತ್ತು ಪೈಲಟ್‌ಗಳ ಸಂಭಾಷಣೆಯ ವಿವರಗಳು ಇದರಲ್ಲಿ ದಾಖಲಾಗಿವೆ.

ಈ ಡೇಟಾವನ್ನು ವಿಶ್ಲೇಷಿಸಲು ಕನಿಷ್ಠ ಮೂರುರಿಂದ ನಾಲ್ಕು ವಾರಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಅಪಘಾತಕ್ಕೆ ತಾಂತ್ರಿಕ ದೋಷ, ಮಾನವೀಯ ತಪ್ಪು ಅಥವಾ ಹವಾಮಾನ ಕಾರಣವೇ ಎನ್ನುವುದು ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !