HEALTH | ಈಗೆಲ್ಲಾ ಸಣ್ಣ ವಯಸ್ಸಿಗೇ ಹಾರ್ಟ್‌ ಅಟ್ಯಾಕ್‌! ಹೃದಯವನ್ನು ಹೆಲ್ತಿಯಾಗಿರಿಸೋಕೆ 10 ಬೆಸ್ಟ್‌ ಮಾರ್ಗಗಳಿವು

ನಮ್ಮ ಹೃದಯ ಆರೋಗ್ಯವನ್ನು ಉತ್ತಮವಾಗಿರಿಸಲು ಸರಿಯಾದ ಆಹಾರ ಮತ್ತು ಜೀವನಶೈಲಿ ತುಂಬಾ ಮುಖ್ಯ. ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಈ ಕೆಳಗಿನ 10 ಅಂಶಗಳು ಸಹಾಯಕ.

ಶಾರೀರಿಕ ಚಟುವಟಿಕೆ ಮತ್ತು ಆಹಾರದ ಸಮತೋಲನ – ನಾವು ಸೇವಿಸುವ ಕ್ಯಾಲೋರಿಗಳನ್ನು ದಿನನಿತ್ಯದ ಚಟುವಟಿಕೆಗಳಾದ ಯೋಗ, ವಾಕಿಂಗ್‌ ಮೂಲಕ ಕರಗಿಸಬೇಕು.

ಹಣ್ಣು ಮತ್ತು ತರಕಾರಿಗಳ ಸೇವನೆ ಹೆಚ್ಚಿಸು – ಆರೋಗ್ಯಕರ ಹೃದಯಕ್ಕೆ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ನಿತ್ಯ ಸೇವಿಸಬೇಕು.

ಪೂರ್ಣ ಧಾನ್ಯಗಳನ್ನು ಆಯ್ಕೆಮಾಡಿ – ಅಕ್ಕಿ, ಗೋಧಿ, ಜೋಳ, ರಾಗಿ ಮುಂತಾದ ಪೂರ್ಣ ಧಾನ್ಯಗಳನ್ನು ಸೇವಿಸುವುದು ಉತ್ತಮ.

ಆರೋಗ್ಯಕರ ಪ್ರೋಟೀನ್‌ಗಳನ್ನು ಆರಿಸಿ – ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹಾರಿ ಆಹಾರ ಮತ್ತು ಸಮುದ್ರ ಆಹಾರ (ಮೀನು) ಸೇವಿಸುವುದು ಉತ್ತಮ.

ನಾನ್-ಟ್ರೋಪಿಕಲ್ ಎಣ್ಣೆ ಬಳಸಿ – ಆಲಿವ್ ಆಯಿಲ್, ಕ್ಯಾನೋಲಾ ಆಯಿಲ್ ಮುಂತಾದ ಆರೋಗ್ಯಕರ ಕೊಬ್ಬಿನ ತೈಲಗಳನ್ನು ಉಪಯೋಗಿಸಿ.

ಕಡಿಮೆ ಸಂಸ್ಕರಿಸಿದ ಆಹಾರಗಳನ್ನು ಆಯ್ಕೆ ಮಾಡಿ – ಹೆಚ್ಚು ಸಂಸ್ಕರಿಸದ, ನೈಸರ್ಗಿಕ ಆಹಾರಗಳನ್ನು ಸೇವಿಸಿ.

ಆಡೆಡ್ ಶುಗರ್ ಕಡಿಮೆ ಮಾಡಿ – ಚಿಪ್ಸ್, ಸೋಡಾ, ಪೇಸ್ಟ್ರಿಗಳು ಮುಂತಾದವುಗಳನ್ನು ಸೇವಿಸುವುದು ಕಡಿಮೆ ಮಾಡಿ.

ಉಪ್ಪಿನ ಸೇವನೆ ಕಡಿಮೆ ಮಾಡಿ – ಹೆಚ್ಚು ಉಪ್ಪು ಇರುವ ಫುಡ್ ಪ್ರೊಡಕ್ಟ್‌ಗಳನ್ನು ಕಡಿಮೆ ಮಾಡಿ.

ಮದ್ಯ ಸೇವನೆಯನ್ನು ನಿಯಂತ್ರಿಸಿ – ಮದ್ಯ ಸೇವನೆ ಮಿತಿಯಾಗಿ ಇರಲಿ ಅಥವಾ ಸಂಪೂರ್ಣವಾಗಿ ತೊರೆದುಬಿಡಿ.

ನೀವು ಎಲ್ಲೇ ಊಟ ಮಾಡಿದರೂ ಈ ನಿಯಮಗಳನ್ನು ಅನುಸರಿಸಿ – ಹೋಟೆಲ್, ಮನೆ, ಅಥವಾ ಕೆಲಸದ ಸ್ಥಳದಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ. ಸದಾ ಆರೋಗ್ಯಕರ ಆಹಾರದ ಆಯ್ಕೆ ಮಾಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!