ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿಂದ ಹೊರಬರುತ್ತಿದಂತೆ ನಟ ದರ್ಶನ್ ಹೊಸ ಲೈಫ್ ಸ್ಟೈಲ್ ಶುರುಮಾಡಿದ್ದಾರೆ. ಹೆಂಡತಿಯ ಅಣತಿಯಂತೆ ಹೆಜ್ಜೆ ಹಾಕ್ತಿದ್ದಾರೆ. ಆದರೆ ಈಗ ಕೊಲೆ ಆರೋಪ ಹೊತ್ತ ದರ್ಶನ್ ಕೇರಳಕ್ಕೆ ಹೋಗಿ ಬಂದಮೇಲೆ ಖಾಕಿ ಅಲರ್ಟ್ ಆಗಿದೆ.
ದರ್ಶನ್ ಇತ್ತೀಚೆಗೆ ಕೇರಳದ ಕಣ್ಣೂರಿನ ಮಾಡಾಯಿಕಾವು ಭಗವತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದರು. ಈ ಪೂಜೆಯಲ್ಲಿ ಮತ್ತೊಬ್ಬ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ.
ದರ್ಶನ್ ಕರೆದುಕೊಂಡು ಹೋಗಿದ್ದ ಪ್ರಜ್ವಲ್ ರೈ, 2017 ರ ಕರೋಪಾಡಿ ಗ್ರಾ.ಪಂ ಸದಸ್ಯ ಜಲೀಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಹೀಗಾಗಿ ಕೋರ್ಟ್ ಕೊಟ್ಟಿರುವ ಅನುಮತಿಗೆ ಬ್ರೇಕ್ ಹಾಕೋದಕ್ಕೆ ಪೊಲೀಸರು ಮುಂದಾಗಿದ್ದು, ಏಪ್ರಿಲ್ 2ರಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.