ಡೈಲಿ ನೈಟ್‌ಗೌನ್‌ ಹಾಕ್ಬೇಕು ಎಂದು ಹೆಂಡತಿಗೆ ಕಾಟಕೊಟ್ಟ ಡಾಕ್ಟರ್‌ ಪತಿ! ಪತ್ನಿ ಸಿಟ್ಟಲ್ಲಿ ಮಾಡಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಊಟ-ಬಟ್ಟೆ ಅವರವರ ಇಷ್ಟ ಅನ್ನೋದು ಬೇಸಿಕ್‌ ವಿಚಾರ, ಸಾಮಾನ್ಯವಾಗಿ ಈ ವಿಚಾರಗಳಲ್ಲಿ ಯಾರಾದರೂ ಕಂಟ್ರೋಲ್‌ ಮಾಡೋದಕ್ಕೆ ಬಂದರೆ ಕೋಪ ಬರೋದು ಮಾಮೂಲಿ. ಅದರಲ್ಲಿಯೂ ನಿತ್ಯವೂ ಜೊತೆಯಲ್ಲಿರುವ ಗಂಡನೇ ಈ ವಿಷಯಕ್ಕೆ ಕಾಟ ಕೊಟ್ಟರೆ ಹೆಂಡತಿ ಏನು ಮಾಡೋಕೆ ಸಾಧ್ಯ?

ಗುಜರಾತ್‌ನ ಅಹಮದಾಬಾದ್‌ನಲ್ಲಿ ವೈದ್ಯನೊಬ್ಬ ತನ್ನ ಹೆಂಡತಿಗೆ ದಿನವೂ ನೈಟ್‌ಗೌನ್‌ ಹಾಕುವಂತೆ ಪೀಡಿಸಿದ್ದಾನೆ. ಒಮ್ಮೆ ಮಾಮೂಲಿಯಾಗಿ ಹೇಳುತ್ತಿದ್ದಾರೇನೋ ಎಂದು ಹೆಂಡತಿ ಒಪ್ಪಿಕೊಂಡು ನೈಟ್‌ಗೌನ್‌ ಹಾಕಿದ್ದಾಳೆ. ಆದರೆ ಬರುಬರುತ್ತಾ ಇದು ಹೇರಿಕೆಯಾಗಿದೆ. ಈ ಕಾರಣದಿಂದ ಇದೀಗ ಆಕೆ ಠಾಣೆ ಮೆಟ್ಟಿಲೇರಿದ್ದಾಳೆ. ಸದ್ಯ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮೇ 2023 ರಲ್ಲಿ ಸೌದಿ ಅರೇಬಿಯಾದಲ್ಲಿ ಮಹಿಳೆ ವಿವಾಹವಾದಳು. ಮದುವೆಯ ನಂತರ, ಆಕೆ ಅಹಮದಾಬಾದ್‌ನ ಬಾಪುನಗರದಲ್ಲಿರುವ ತನ್ನ ಅತ್ತೆಯ ಮನೆಗೆ ಬಂದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ನಂತರ ನಿಧಾನವಾಗಿ ಪತಿಯ ನಿಜವಾದ ಬಣ್ಣ ಹೊರಬರಲು ಪ್ರಾರಂಭಿಸಿತು. ವೃತ್ತಿಯಲ್ಲಿ ವೈದ್ಯನಾಗಿರುವ ಪತಿ, ಮದ್ಯದ ಅಮಲಿನಲ್ಲಿ ಆಕೆಯನ್ನು ನಿಂದಿಸುತ್ತಿದ್ದನು. ಅಷ್ಟೇ ಅಲ್ಲದೆ ಪ್ರತಿದಿನ ನೈಟ್‌ಗೌನ್‌ ಧರಿಸುವಂತೆ ಒತ್ತಾಯಿಸುತ್ತಾ ಡ್ರೆಸ್ಸಿಂಗ್ ಸೆನ್ಸ್ ಅನ್ನು ಕೂಡಾ ನಿಯಂತ್ರಿಸುತ್ತಿದ್ದನು. ಈ ಬಗ್ಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ತನ್ನ ಅತ್ತೆ-ಮಾವಂದಿರಿಗೆ ಹೇಳಿದಾಗ, ಅವರು ಕೂಡ ಆಕೆಗೆ ಸುಮ್ಮನಿರುವಂತೆ ಸೂಚಿಸಿದರು.

ಇವರ ಕಾಟದಿಂದ ಬೇಸತ್ತು ಕೊನೆಗೆ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನ ಡ್ರೆಸ್ಸಿಂಗ್ ಸೆನ್ಸ್ ನಿಯಂತ್ರಿಸುವುದಲ್ಲದೆ, ತಾನು ಯಾವಾಗ ಮಲಗಬೇಕು, ಯಾವಾಗ ಏಳಬೇಕು ಎಲ್ಲವನ್ನು ಗಂಡನೇ ನಿರ್ಧರಿಸುತ್ತಿದ್ದ ಮತ್ತು ನನಗೆ ಬೆದರಿಸುತ್ತಿದ್ದನು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಆಘಾತಕಾರಿ ವಿಷಯವೇನೆಂದರೆ ಆಕೆಯ ಗಂಡ ತನ್ನ ಪಾದಗಳಿಗೆ ಮಸಾಜ್ ಮಾಡಲು ಒತ್ತಾಯಿಸುತ್ತಿದ್ದನು ಇದಕ್ಕೆ ಒಲ್ಲೆ ಎಂದರೆ ಆಕೆಗೆ ನಿದ್ರೆ ಮಾಡಲು ಸಹ ಬಿಡುತ್ತಿರಲಿಲ್ಲ. ಮೇ 2024 ರಲ್ಲಿ ಇವರ ಇಡೀ ಕುಟುಂಬ ಕಾಶ್ಮೀರಕ್ಕೆ ಪ್ರವಾಸ ಹೋದಾಗ ಈ ವಿಷಯ ಇನ್ನಷ್ಟು ಹದಗೆಟ್ಟಿತು. ಈ ಪ್ರವಾಸದ ನಂತರ, ಮಹಿಳೆ ತನ್ನ ಹೆತ್ತವರ ಮನೆಗೆ ಹೋದಳು. ಆಕೆಯ ಕುಟುಂಬ ರಾಜಿ ಸಂಧಾನದ ಮೂಲಕ ಸಂಬಂಧವನ್ನು ಉಳಿಸಲು ಪ್ರಯತ್ನಿಸಿತು. ಆದರೆ ಇದಕ್ಕೆ ಪತಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದಾಗ, ಮಹಿಳೆ ಅಂತಿಮವಾಗಿ ವೆಜಲ್ಪುರ ಪೊಲೀಸ್‌ ಠಾಣೆಯಲ್ಲಿ ಕಿರುಕುಳ ಆರೋಪದಡಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!