ಲೋಕವೆಲ್ಲಾ ಗೊರಕೆ ಹೊಡೆಯುತ್ತಿರುವಾಗ, ಬೀದಿ ನಾಯಿಗಳು ಬೊಗಳಲು ಶುರು ಮಾಡಿದ ಮೇಲೆ ಅಂದರೆ ‘ದೆವ್ವದ ಸಮಯ’ ಎಂದು ಕರೆಯಲ್ಪಡುವ ನಡುರಾತ್ರಿಯಲ್ಲಿ ಅನೇಕರು ಇನ್ನು ಎಚ್ಚರವಿರುತ್ತಾರೆ. ಸ್ಮಾರ್ಟ್‌ಫೋನ್ ಸ್ಕ್ರೋಲ್ ಮಾಡುತ್ತಲೋ ಅಥವಾ ಸುಮ್ಮನೆ ಕಿಟಕಿಯ ಆಚೆ ನೋಡುತ್ತಲೋ ಕಾಲ ಕಳೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ.
ಇದಕ್ಕೆ ಕಾರಣಗಳೇನು?
ಮೊಬೈಲ್ ಫೋನ್‌ಗಳಿಂದ ಹೊರಬರುವ ನೀಲಿ ಬೆಳಕು, ಮೆಲಟೋನಿನ್ ಎಂಬ ನಿದ್ರೆಯ ಹಾರ್ಮೋನ್ ಉತ್ಪತ್ತಿಯನ್ನು ತಡೆಯುತ್ತದೆ. ಇದರಿಂದ ಮೆದುಳು ಹಗಲೆಂದೇ ಭಾವಿಸಿ ಎಚ್ಚರವಾಗಿರುವಂತೆ ಮಾಡುತ್ತದೆ.
ಇಡೀ ದಿನದ ಕೆಲಸದ ಒತ್ತಡ ಮತ್ತು ಆತಂಕಗಳು ಮಲಗಿದ ತಕ್ಷಣ ನೆನಪಾಗುತ್ತವೆ. ಈ ‘ಓವರ್ ಥಿಂಕಿಂಗ್’ ಅಭ್ಯಾಸ ನಿದ್ದೆಯನ್ನು ದೂರ ಮಾಡುತ್ತದೆ.
ಕೆಲವರ ದೇಹದ ನೈಸರ್ಗಿಕ ಗಡಿಯಾರವೇ ಬದಲಾಗಿರುತ್ತದೆ. ಇವರನ್ನು ವಿಜ್ಞಾನದ ಭಾಷೆಯಲ್ಲಿ ‘ನೈಟ್ ಔಲ್ಸ್’ ಎಂದು ಕರೆಯಲಾಗುತ್ತದೆ.
ಸಂಜೆ ಅಥವಾ ರಾತ್ರಿ ಹೊತ್ತು ಕುಡಿಯುವ ಕಾಫಿ/ಟೀ ನಿದ್ದೆಯ ಶತ್ರುವಾಗಿ ಬದಲಾಗಬಹುದು.
ರಾತ್ರಿ ಎಚ್ಚರವಿರುವುದು ಕೇವಲ ಹವ್ಯಾಸವಲ್ಲ, ಅದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ದೆವ್ವಗಳಿಗಿಂತಲೂ ಹೆಚ್ಚಾಗಿ ನಿದ್ರಾಹೀನತೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಡುತ್ತಿದೆ. ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳುವುದು ಇಂದಿನ ಅಗತ್ಯ.



