ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಚಿತ್ರರಂಗ ಬೇಬೋ, ಕರೀನಾ ಕಪೂರ್ ‘ನಟನಿಗೆ ಸಿಗುವಷ್ಟೇ ಸಂಭಾವನೆ ನನಗೂ ಬೇಕು’ ಎಂದು ಹೇಳುವ ಮೂಲಕ ತಮಗೆ ಸಿಗೋ ಸಂಭಾವನೆ ಬಗ್ಗೆ ಬೇಸರ ಪಟ್ಟುಕೊಂಡಿದ್ದಾರೆ.
ಕೆಲವು ತಿಂಗಳ ಹಿಂದೆ ಟಿವಿ ಕಾರ್ಯಕ್ರಮದಲ್ಲಿ ಕರೀನಾ ಕಪೂರ್ ಮತ್ತು ಅಕ್ಷಯ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಸಂಭಾವನೆ ವಿಚಾರ ಬಂದಿದೆ. ನನಗೆ ಅಕ್ಷಯ್ ಕುಮಾರ್ ಪಡೆಯುವಷ್ಟು ಸಂಭಾವನೆ ಬೇಕು ಎಂದು ಕರೀನಾ ಡಿಮ್ಯಾಂಡ್ ಮಾಡಿದ್ದರು.
ಹಾಗಿದ್ರೆ ಕರಣ್ ಜೋಹಾರ್ ಜೊತೆ ಸೇರಿಕೊಂಡು ನಾನು ಸಿನಿಮಾ ಮಾಡುತ್ತೀನಿ. ನೀವು ನಾಯಕಿ ಆಗಬೇಕು, ನನ್ನಷ್ಟು ಸಂಭಾವನೆ ಕೊಡುತ್ತೀನಿ ಆದರೆ ನಾನು ಮಾತ್ರ ಸಿನಿಮಾ ಗಳಿಸುವ ಹಣದಲ್ಲಿ 50% ತೆಗೆದುಕೊಳ್ಳುತ್ತೀನಿ ಎಂದು ಅಕ್ಷಯ್ ಹೇಳುತ್ತಾರೆ. ಇದನ್ನು ಕೇಳಿ ಶಾಕ್ ಆದ ಕರೀನಾ ಕಪೂರ್ ಬೇಡ ಬೇಡ ಇದಕ್ಕೆ ನಾನು ಒಪ್ಪುವುದಿಲ್ಲ ಎನ್ನುತ್ತಾರೆ.
ಯಾಕೆ ಗೊತ್ತಾ ಅಕ್ಷಯ್ ಕುಮಾರ್‌ಗಾಗಿ 50 ಕೋಟಿ ಬಜೆಟ್ ಸಿನಿಮಾ ಮಾಡಿದ್ರೆ ರಿಲೀಸ್ ಆದ್ಮೇಲೆ 250 ಕೋಟಿ ಗಳಿಸೋದು ಖಂಡಿತ ಹೀಗಾಗಿ ಸಂಭಾವನೆಗಿಂತ 50% ಶೇರ್ ಜಾಸ್ತಿ ಅಕ್ಷಯ್‌ಗೆ ಸಿಗುತ್ತೆ.