ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಿಂದ ಪಲಾಯನಗೈದು ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭೂಮಿ ಕಬಳಿಕೆಗೆ ಯತ್ನಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ ದೇಶದಲ್ಲಿ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಆರೋಪ ಎದುರಿಸುತ್ತಿದ್ದಾರೆ.
ನಿತ್ಯಾನಂದ ಬೊಲಿವಿಯಾದ ಬುಡಕಟ್ಟು ಜನರ ಜೊತೆಗೆ ಅತಿ ದೊಡ್ಡ ಒಪ್ಪಂದಕ್ಕೆ ಮುಂದಾಗಿದ್ದು, ಬೊಲಿವಿಯಾ ಬುಡಕಟ್ಟು ಜನರ ಜೊತೆ ಭೂಮಿ ಲೀಸ್‌ಗೆ ನಿತ್ಯ ಒಪ್ಪಂದಕ್ಕೆ ರೆಡಿಯಾಗಿದ್ದರು. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದೆ. ನಿತ್ಯಾನಂದ ಭೂಮಿ ಲೀಸ್‌ಗೆ ಪಡೆಯುವ ಪ್ರಯತ್ನಕ್ಕೆ ಬ್ರೇಕ್ ಹಾಕಲಾಗಿದೆ.
3,900 ಚದರ ಕಿ.ಮೀ ಭೂಮಿಗೆ ದಿನಕ್ಕೆ 2,455 ರೂಪಾಯಿ ಲೀಸ್ ಹಣ ನೀಡೋ ಒಪ್ಪಂದ ಇದಾಗಿತ್ತು. 3,900 ಚದರ ಕಿ.ಮೀ ಭೂಮಿಗೆ ತಿಂಗಳಿಗೆ 74,667 ರೂಪಾಯಿ, ವರ್ಷಕ್ಕೆ 8.96 ಲಕ್ಷ ರೂಪಾಯಿ ಹಣ ಪಾವತಿಸಿ ದೊಡ್ಡ ಭೂಮಿ ಲೀಸ್‌ಗೆ ಪಡೆಯೋ ಪ್ಲಾನ್ ಮಾಡಲಾಗಿತ್ತು.
ಆದ್ರೆ ನಿತ್ಯಾನಂದನ ಲೀಸ್ ಯತ್ನ ಗಮನಕ್ಕೆ ಬರುತ್ತಿದ್ದಂತೆ, ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಬುಡಕಟ್ಚು ಸಮುದಾಯದವರಿಂದ ಭೂಮಿ ಲೀಸ್ ಪಡೆಯಲು ಅವಕಾಶವಿಲ್ಲ ಎಂದಿದೆ.
ನಿತ್ಯಾನಂದನಿಂದ ಭೂಮಿ ಲೀಸ್‌ಗೆ ಪಡೆಯುವ ಒಪ್ಪಂದ ಮಾಡಿಕೊಂಡಿದ್ದರೂ, ಮಾನ್ಯತೆ ಇಲ್ಲ ಎಂದು ಬೊಲಿವಿಯಾ ಸರ್ಕಾರ ಸ್ಪಷ್ಪಪಡಿಸಿದೆ. ಅಲ್ಲದೇ ಈ ಲ್ಯಾಂಡ್ ಡೀಲ್ನಲ್ಲಿ ಭಾಗಿಯಾದವರನ್ನೆಲ್ಲಾ ಬೊಲಿವಿಯಾದಿಂದ ಗಡೀಪಾರು ಮಾಡುವ ಕಠಿಣ ಕ್ರಮಕ್ಕೆ ಮುಂದಾಗಿದೆ.