ಹೊಸದಿಗಂತ ವರದಿ,ಕಾರವಾರ :
ಹನಿಟ್ರ್ಯಾಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವನ್ನು ಬಲವಾಗಿ ತಳ್ಳಿ ಹಾಕಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ,ಸರ್ಕಾರ ಇದನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ , ಸೂಕ್ತ ತನಿಖೆ ನಡೆಸಲಿದೆ ಎಂದಿದ್ದಾರೆ.
ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಭಾವನೆ ಯಾಕೆ ಬರುತ್ತಿದೆ ಗೊತ್ತಿಲ್ಲ. ಸಚಿವ ರಾಜಣ್ಣ ಕಾರ್ಯ ಒತ್ತಡದ ಕಾರಣದಿಂದ ದೂರು ನೀಡಲು ನಾಲ್ಕು ದಿನ ತಡವಾಗಿದೆ. ಈಗ ನಿನ್ನೆ ಮನವಿ ನೀಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸೂಕ್ತ ತನಿಖೆ ಮಾಡುತ್ತೇವೆ. ಅನುಮಾನವೇ ಬೇಡ ಎಂದರು.
ಹನಿಟ್ರ್ಯಾಪ್ ಪ್ರಕರಣ ಸಿಎಂ ಖುರ್ಚಿಯ ಸುತ್ತ ಸುತ್ತುತ್ತಿದೆ ಎಂಬ ಮಾತನ್ನು ಅವರೂ ತಳ್ಳಿ ಹಾಕಿದರು. ಇಂತಹ ಊಹೆ ಬೇಡ, ಸರ್ಕಾರ ಗಟ್ಟಿಯಾಗಿದೆ ಎಂದರು.