Thursday, January 29, 2026
Thursday, January 29, 2026
spot_img

ರಾಜ್ಯಪಾಲರ ಫೋನ್ ಕರೆಗಳನ್ನು ಎಂದಿಗೂ ಕದ್ದಾಲಿಸಿಲ್ಲ: ಆರೋಪ ಸುಳ್ಳು ಎಂದ ಪರಮೇಶ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರ ಫೋನ್‌ ಕರೆಗಳನ್ನು ಕಾಂಗ್ರೆಸ್‌ ಸರ್ಕಾರ ಕದ್ದು ಆಲಿಸುತ್ತಿದೆ ಎಂದು ಬಿಜೆಪಿ ದೂರಿದೆ. ಆದರೆ ಇದು ಸುಳ್ಳು ಎಂದು ಗೃಹಸಚಿವ ಜಿ ಪರಮೇಶ್ವರ ಹೇಳಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಕೇಸರಿ ಪಕ್ಷದ ನಾಯಕರ ಆರೋಪವು ಈ ಹಿಂದೆ ಬಿಜೆಪಿ ಮಾಡಿದ್ದನ್ನೇ, ಕಾಂಗ್ರೆಸ್ ಮಾಡುತ್ತಿದೆ ಎಂಬಂತೆ ಕಾಣುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಗೋವಾದಲ್ಲಿ ಬೀಚ್ ಮಾತ್ರ ಇರೋದಲ್ಲ, ದೇವಸ್ಥಾನಗಳೂ ಇವೆ! ಯಾವತ್ತಾದ್ರೂ ನೋಡಿದ್ದೀರಾ?

ನಾವು ಯಾರ ಫೋನ್ ಕದ್ದಾಲಿಕೆ ಮಾಡಿಲ್ಲ ಅಥವಾ ಭವಿಷ್ಯದಲ್ಲಿಯೂ ಮಾಡುವುದಿಲ್ಲ. ಅಲ್ಲದೆ, ನಮಗೆ ಅದರ ಅಗತ್ಯವಿಲ್ಲ. ಬಿಜೆಪಿ ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ನೂರಾರು ಆರೋಪಗಳನ್ನು ಮಾಡುತ್ತದೆ. ಆದರೆ, ಅವೆಲ್ಲವುಗಳಿಗೆ ಉತ್ತರಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.

ರಾಜ್ಯಪಾಲರು ಇತ್ತೀಚೆಗೆ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣ ಕೇವಲ ಮೂರು ಸಾಲುಗಳಿಗೆ ಸೀಮಿತವಾಗಿದ್ದ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಗೆಹ್ಲೋಟ್ ಕೇಂದ್ರದಿಂದ ದೂರವಾಣಿ ಮೂಲಕ ಸೂಚನೆಗಳನ್ನು ಪಡೆಯುತ್ತಿರುವಂತೆ ತೋರುತ್ತಿದೆ ಎಂದು ಹೇಳಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !