ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬ್ರಿಡ್ಜ್ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಒಂದೇ ಕುಟುಂಬದ ಶಿವಪ್ರಕಾಶ್ ಬಿನ್ ಜಗದೀಶ್ (37 ವರ್ಷ), ಪುಟ್ಟಗೌರಮ್ಮ ಕೋಂ ಮೋಟೆಗೌಡ (72 ವರ್ಷ), ಶಿವರತ್ನ ಕೋಂ ಚಿನ್ನ ಮತ್ತು (50 ವರ್ಷ) ಮೃತಪಟ್ಟಿದ್ದಾರೆ. ನಟರಾಜು (42 ವರ್ಷ), ಹಾಗೂ ಸುಮಾ (36 ವರ್ಷ)ಗೆ ಗಂಭೀರ ಗಾಯಗಳಾಗಿವೆ. ಕಾರಿನಲ್ಲಿ ಇದ್ದ ಎಲ್ಲರೂ ಚನ್ನಪಟ್ಟಣ ತಾಲೂಕಿನ ಮಂಗಾಡಳ್ಳಿ ಗ್ರಾಮದವರು.
ಕ್ಯಾಂಟರ್ ನ ಚಾಲಕನಾದ ನಾಗೇಶ್ ಗೂ ಗಂಭೀರ ಗಾಯವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ಮೂವರ ಮೃತದೇಹವು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.