ಹೊಸದಿಗಂತ ಡಿಜಿಟಲ್ ಡೆಸ್ಕ್:
MSP ದರ ನಿಗದಿ ಮಾಡುವ ಬಗ್ಗೆ ಇಂದು ನಡೆದ ಸಭೆಯಲ್ಲಿ ರಾಗಿ, ಜೋಳ, ತೊಗರಿ ಖರೀದಿ ಮಾಡುವ ಬಗ್ಗೆ ಮಹತ್ವದ ತೀರ್ಮಾನವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸಭೆ ಬಳಿಕ ಮಾತನಾಡಿದ ಅವರು, ರಾಗಿ, ಜೋಳ, ತೊಗರಿ ಖರೀದಿ ಮಾಡುತ್ತಿದ್ದೇವೆ. ಇದಕ್ಕೆ 450 ರೂ. ಹೆಚ್ಚುವರಿ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಜಿಯೋ ಟ್ಯಾಗ್ ಕೊಟ್ಟು ಖರೀದಿ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿರುವ ಅವರು. ಬೆಂಗಳೂರಿನ ಕಾವೇರಿ ಆಸ್ಪತ್ರೆಯು CSR ಫಂಡ್ ನಲ್ಲಿ 100 ಜನ ರೈತರಿಗೆ ಮಂಡಿ ಚಿಪ್ಪು ಸಮಸ್ಯೆಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ 100 ರಿಂದ 150 ಜನ ರೈತರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಈ ಚಿಕಿತ್ಸೆ ಒಳಗಾಗುವವರ ಬಳಿ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಇದ್ದರೆ ಸೂಕ್ತ ಎಂದು ಈ ಮೂಲಕ ರೈತರಿಗೆ ಡಬಲ್ ಗುಡ್ ನ್ಯೂಸ್ ನೀಡಿದ್ದಾರೆ.