ಮಗಳಿಗೆ ‘ಹಿಂದ್’ ಎಂದು ನಾಮಕರಣ ಮಾಡಿದ ದುಬೈ ರಾಜಕುಮಾರ: ಈ ಹೆಸರಿನ ಅರ್ಥವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನ ರಾಜಕುಮಾರ ಶೇಖ್​ ಹಮ್ದಾನ್​ ಮತ್ತು ಅವರ ಪತ್ನಿ ಶೀಖಾ ಶೀಖಾ ಬಿಂತ್ ಸಯೀದ್​ ಬಿನ್​ ಥಾನಿ ಅಲ್ ಮುಕ್ತೌಮ್​ ತಮ್ಮ ನಾಲ್ಕನೇ ಮಗುವನ್ನು ಮನೆಗೆ ಸ್ವಾಗತಿಸಿದ್ದಾರೆ.

ಶೇಖ್​ ಹಮ್ದಾನ್ ಹಾಗೂ ಅವರ ಕುಟುಂಬದವರೆಲ್ಲರೂ ಸೇರಿ ಮಗುವಿಗೆ ಹಿಂದ್ ಎಂದು ನಾಮಕರಣ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶೇಖ್ ಹಮ್ದಾನ್, ನಮ್ಮ ಪ್ರಾರ್ಥನೆಯನ್ನು ಪೂರ್ಣಗೊಳಿಸಿ ನಮಗೆ ಸಂಪೂರ್ಣ ಕೃಪೆ ತೋರಿದ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರು ನಮಗೆ ಹೆಣ್ಣು ಮಗುವನ್ನು ಕರುಣಿಸಿದ್ದಾನೆ. ‘ಹಿಂದ್​’ ಇವಳು ಹಮ್ದಾನ್​ ಬಿನ್ ಮೊಹಮ್ಮೆದ್ ಅಲ್ ಮಕ್ತೌಮ್​ನ ಮಗಳು ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದ್ ಹೆಸರಿನ ಅರ್ಥವೇನು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಹಿಂದ್ ಎಂದರೆ ಸಮೃದ್ಧಿ ಎಂದು ಅರ್ಥ. ರಾಜಕುಮಾರ ಹಮ್ದಾನ್​ ಪುತ್ರಿಗೆ ಅವಳ ಅಜ್ಜಿಯ ಹೆಸರನ್ನೇ ಇಡಲಾಗಿದೆ.

ಶೇಖ್ ಹಮ್ದಾನ್​ 2008ರಲ್ಲಿ ದುಬೈನ ರಾಜಕುಮಾರರಾದರು. ಇವರು ಯುಎಇ ದೇಶದ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವಾಲಯವನ್ನು ಕೂಡ ನಿಭಾಯಿಸುತ್ತಾರೆ, ಇವರು ದುಬೈನ್ನು ಆಳುತ್ತಿರುವ ಶೇಖ್ ಮೊಹಮ್ಮದ್​ ಬಿನ್ ರಶೀದ್ ಅಲ್ನ ಮಕ್ತೌಮ್​ ಮತ್ತು ಶೇಖ್ ಹಿಂದ್​ ಬಿಂತ್​ ಮಕ್ತೌಮ್​ ಬಿನ್ ಜುಮಾ ಅಲ್ ಮಕ್ತೌಮ್ ಅವರ ಎರಡನೇ ಪುತ್ರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!