ಹೊಸದಿಗಂತ ಡಿಜಿಟಲ್ ಡೆಸ್ಕ್:
ಈದ್-ಉಲ್-ಫಿತರ್ ಮತ್ತು ರಂಜಾನ್ನ ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಮಿರತ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಂತಹವರ ಪಾಸ್ಪೋರ್ಟ್ ಹಾಗೂ ಚಾಲನಾ ಪರವಾನಗಿಯನ್ನೂ ರದ್ದುಗೊಳಿಸಬಹುದು ಎಂದು ಮೀರತ್ ಪೊಲೀಸ್ ಅಧೀಕ್ಷಕ ಆಯುಷ್ ವಿಕ್ರಮ್ ಸಿಂಗ್ ಎಚ್ಚರಿಸಿದ್ದಾರೆ. ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಯಾರೂ ರಸ್ತೆಗಳಲ್ಲಿ ನಮಾಜ್ ಮಾಡಬಾರದು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕದಳ ನಾಯಕ ಜಯಂತ್ ಸಿಂಗ್ ಚೌಧರಿ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ ಅಂತವರ ಪಾಸ್ಪೋರ್ಟ್ ಮತ್ತು ಪರವಾನಗಿಗಳನ್ನು ರದ್ದುಗೊಳಿಸಬಹುದು. ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಇಲ್ಲದೆ ಹೊಸ ಪಾಸ್ಪೋರ್ಟ್ ಪಡೆಯುವುದು ಕಷ್ಟಕರವಾಗುತ್ತದೆ. ನ್ಯಾಯಾಲಯದಿಂದ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಅಂತಹ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.