ಗುಡ್ ನ್ಯೂಸ್: ಇನ್ನು ಮುಂದೆ ಮನೆ ಬಾಗಿಲಿಗೇ ಬರಲಿದೆ ದೇವಾಲಯಗಳ ಪ್ರಸಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಇ- ಪ್ರಸಾದ ಸೇವೆಗೆ ಧಾರ್ಮಿಕ ದತ್ತಿ ಇಲಾಖೆ ಗುರುವಾರದಿಂದ ಚಾಲನೆ ನೀಡಿದೆ.

ನಗರದ ಶಾಂತಿನಗರ ಸಾರಿಗೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

‘ಇ-ಪ್ರಸಾದ’ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ದೇವಾಲಯಗಳ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಂಡಾರ, ಕುಂಕುಮ, ಭಸ್ಮ, ಬಿಲ್ವಪತ್ರೆ, ತುಳಸಿ, ದೇವರ ಚಿತ್ರವಿರುವ ಪ್ಯಾಕೆಟ್ ಅಳತೆಯ ಲ್ಯಾಮಿನೇಟೆಡ್ ಭಾವಚಿತ್ರ, ದೇವರ ಸ್ಥಳ ಮಹಿಮೆ ಸ್ತೋತ್ರ ಮುದ್ರಣಗಳನ್ನು ಭಕ್ತರು ಈ ಪ್ರಸಾದ ಸೇವೆಯಿಂದ ತರಿಸಿಕೊಳ್ಳಬಹುದು. csc.devalayas.com ಆನ್ ಲೈನ್ ಮೂಲಕ ಪ್ರಸಾದ ತರಿಸಿ ಕೊಳ್ಳಬಹುದಾಗಿದ. ಸಿಎಸ್‌ಸಿ ಮೂಲಕ ಈಗಾಗಲೇ 241 ಪ್ರಸಾದ ಪ್ಯಾಕೆಟ್‌ಗಳನ್ನು ಭಕ್ತರ ಮನೆಗಳಿಗೆ ತಲುಪಿಸಲಾಗಿದೆ. ಪ್ರತಿ ಪ್ರಸಾದ ಪ್ಯಾಕೆಟ್‌ನ ಬೆಲೆ 100 ರಿಂದ 200 ರೂ.ಗಳವರೆಗೆ ಇರಲಿದೆ ಎಂದು ಮಾಹಿತಿ ನೀಡಿದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಾಲಯಗಳಿವೆ. ಈ ಪೈಕಿ ‘ಎ’ ಮತ್ತು ‘ಬಿ’ ದರ್ಜೆ ದೇವಾಲಯಗಳ ಸಂಖ್ಯೆ 398. ನಾನಾ ಕಾರಣಗಳಿಂದ ಭಕ್ತರಿಗೆ ದೇವಾಲಯಗಳಿಗೆ ತೆರಳಲು ಆಗುವುದಿಲ್ಲ. ಅಂತಹವರು ಬಯಸಿದರೆ ಆನ್‌ಲೈನ್‌ ಮೂಲಕ ದೇವಾಲಯಗಳ ಪ್ರಸಾದ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!