ಪುಟಾಣಿ ಕಂಠದಲ್ಲಿ ಮೂಡಿಬಂದ ʼವಂದೇಮಾತರಂʼಗೆ ಮನಸೋತ ಅಮಿತ್‌ ಶಾ, ಕಂದನಿಗೆ ದೊಡ್ಡ ಗಿಫ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಗೀತಕ್ಕೆ ಮನಸೋಲದವರಿಲ್ಲ, ಅದರಲ್ಲಿಯೂ ಪುಟಾಣಿಗಳು ಹಾಡು ಹಾಡಿದರೆ ಅದು ಸೀದ ಮನಸ್ಸಿನಾಳದಲ್ಲಿ ಕುಳಿತುಬಿಡುತ್ತದೆ. ಅದೇ ರೀತಿ ಇಲ್ಲೊಂದು ಪುಟಾಣಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮನಸ್ಸನ್ನು ಗೆದ್ದಿದ್ದಾಳೆ.

ಮಿಜೋರಾಂನ 7 ವರ್ಷದ ಎಸ್ತರ್ ಲಾಲ್ದುಹವಾಮಿ ಪ್ರತಿಭೆಗೆ ಅಮಿತ್‌ ಶಾ ಮನಸೋತಿದ್ದಾರೆ. ಆಕೆಗೆ ಗಿಟಾರ್ ಉಡುಗೊರೆಯಾಗಿ ನೀಡುವ ಮೂಲಕ ಬಾಲಕಿಯ ಪ್ರತಿಭೆಗೆ ಗೌರವಿಸಿದ್ದಾರೆ.

ಅಮಿತ್ ಶಾ ಮಿಜೋರಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಅಲ್ಲಿ 7 ವರ್ಷದ ಬಾಲಕಿ ವಂದೇ ಮಾತರಂ ಹಾಡನ್ನು ಹಾಡಿದ್ದಳು. ಅಲ್ಲಿದ್ದವರೆಲ್ಲರೂ ಆ ಹುಡುಗಿಯ ಗಾಯನಕ್ಕೆ ಮನಸೋತದ್ದು ನಿಜ. ಈ ಹುಡುಗಿಯ ಗಾಯನ ಕೇಳಿ ಅಮಿತ್​​​ ಶಾ ಭಾವುಕರಾಗಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!