ಹೊಸದಿಗಂತ ವರದಿ ಮುಂಡಗೋಡ:
ಸಿಲಿಂಡರ್ ಸೋರಿಕೆ ಯಿಂದ ಮನೆಗೆ ಬೆಂಕಿ ತಗುಲಿ ಮನೆಯಲ್ಲಿ ಇದ್ದ ದಿನಬಳಕೆಯ ವಸ್ತು ಅಡುಗೆ ಸಾಮಾನುಗಳು ಸೇರಿದಂತೆ ಮನೆಯ ಮೇಲ್ಚಾವಣಿ ಸುಟ್ಟು ಹಾನಿಯಾದ ಘಟನೆ
ತಾಲೂಕಿನ ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಅರಶೀಣಗೇರಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಸಕ್ರಿವ್ವಾ ರವಿ ಲಮಾಣಿ ಎಂಬುವರಿಗೆ ಸೇರಿದ ಮನೆ ಸುಟ್ಟು ಹಾನಿಯಾಗಿದೆ. ಎಂದಿನಂತೆ ಅಡುಗೆ ಕೆಲಸ ಮುಗಿಸಿಕೊಂಡು ಮನೆಯಲ್ಲಿದ್ದ ಸಮಯದಲ್ಲಿ ಅಡುಗೆ ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ತಗುಲಿದೆ. ವಿಷಯ ತಿಳಿದು ಸ್ಥಳೀಯರು ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ ಆದರು ಹತೋಟಿಗೆ ಬಾರದ ಬೆಂಕಿಯಿಂದ ಭಾಗಶಃವಾಗಿ ಸುಟ್ಟು ಹಾನಿಯಾಗಿದೆ.
ಈ ಅವಘಡದಿಂದ ಮನೆಯ ದಾಖಲಾತಿಗಳು,ಅಡುಗೆ ಸಾಮಾಗ್ರಿಗಳು, ಪಾತ್ರೆಗಳು, ರೇಶನ್,ದಿನನಿತ್ಯ ಬಳಸುವ ವಸ್ತುಗಳು, ನಗದು ರೂಪಾಯಿ ಮನೆಯ ಮೇಲ್ಚಾವಣಿ ಸುಟ್ಟು ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಠಾಣೆಯವರು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡು ಹೆಚ್ಚಿನ ರೀತಿಯಲ್ಲಿ ಆಗುವ ಅನಾಹುತ ವನ್ನು ತಪ್ಪಿಸಿದ್ದಾರೆ.
ಕಾರ್ಯಾಚರಣೆ ಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ಮೂಲಿಮನಿ
ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮಲ್ಲೀಗವಾಡ, ಅಡಿವೆಪ್ಪ ಕುರುವಿನಕೊಪ್ಪ, ವೆಂಕಟೇಶ ಪಟಿಗೆ, ಹರೀಶ್ ಪಟಗಾರ, ದುರಗಪ್ಪ ಹರಿಜನ, ರಾಹುಲ ಜಿಡ್ಡಿಮನಿ ಭಾಗವಹಿಸಿದ್ದರು.