Thursday, January 29, 2026
Thursday, January 29, 2026
spot_img

ಹಂಪಿಯಲ್ಲಿ ಅಪರೂಪದ ಬ್ರೌನ್‌ ರಾಕ್‌ ಚಾಟ್‌ ಹಕ್ಕಿ ಪತ್ತೆ, ಪಕ್ಷಿ ಪ್ರೇಮಿಗಳು ಫುಲ್‌ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಮತ್ತು ಮಧ್ಯ ಭಾರತದ ಕೆಲ ಭಾಗಗಳಲ್ಲಿ ಮಾತ್ರ ಆವಾಸಸ್ಥಾನ ಹೊಂದಿರುವ ಅಪರೂಪದ ಬ್ರೌನ್ ರಾಕ್ ಚಾಟ್ ಪಕ್ಷಿ ಹಂಪಿಯಲ್ಲಿ ಕಾಣಿಸಿಕೊಂಡಿದ್ದು, ಈ ಬೆಳವಣಿಕೆ ಪಕ್ಷಿ ಪ್ರೇಮಿಗಳ ಮತ್ತು ಸಂರಕ್ಷಣಾ ಕಾರ್ಯಕರ್ತರಲ್ಲಿ ಸಂತಸ ಮತ್ತು ಆಶ್ಚರ್ಯವನ್ನು ಮೂಡಿಸಿದೆ.

ಪಂಪಯ್ಯಸ್ವಾಮಿ ಮಳಿಮಠ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ತಂಡವು ಹಂಪಿಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಅಚ್ಯುತರಾಯ ದೇಗುಲ ಸ್ಮಾರಕಗಳ ಮೇಲೆ ಬ್ರೌನ್ ರಾಕ್ ಚಾಟ್ ಓಡಾಡುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಸಬ್ಯಸಾಚಿ ರಾಯ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಬ್ರೌನ್ ರಾಕ್ ಚಾಟ್ ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತವೆ. ಹೀಗಾಗಿ ಹಂಪಿಯ ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ಬಂಡೆಗಳಿಂದ ಕೂಡಿದ ಭೂದೃಶ್ಯವು ಈ ಪ್ರಭೇದಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ.

ಇದಕ್ಕೂ ಮೊದಲು ಈ ಪಕ್ಷಿಯನ್ನು ಪರಿಸರ ಪ್ರೇಮಿ ಪಂಪಯ್ಯಸ್ವಾಮಿ ಮಳಿಮಠ ಅವರು ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇಗುಲದ ಬಳಿ ಪತ್ತೆ ಹಚ್ಚಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !