ಇತಿಹಾಸದಲ್ಲೇ ಅತಿದೊಡ್ಡ ಆರ್ಡರ್‌ ಪಡೆದ HAL : ಕರ್ನಾಟಕದಲ್ಲೇ ತಯಾರಾಗಲಿದೆ ‘ಪ್ರಚಂಡ್‌’ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ 62,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 156 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಭದ್ರತೆಯ ಕುರಿತಾದ ಸಂಪುಟ ಸಮಿತಿ (CCS) ಇಂದು ಅನುಮೋದನೆ ನೀಡಿದೆ.

ಇದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ಕಂಪನಿಯ ಇದುವರೆಗಿನ ಅತಿದೊಡ್ಡ ಆರ್ಡರ್ ಇದಾಗಿದ್ದು, ಹೆಲಿಕಾಪ್ಟರ್‌ಗಳನ್ನು ಕರ್ನಾಟಕದ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಪ್ಲ್ಯಾಂಟ್‌ಗಳಲ್ಲಿ ನಿರ್ಮಿಸಲಾಗುವುದು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಕಳೆದ ವರ್ಷ ಜೂನ್‌ನಲ್ಲಿ 156 ಲಘು ಯುದ್ಧ ಹೆಲಿಕಾಪ್ಟರ್‌ಗಳ (LCH) ಟೆಂಡರ್ ಅನ್ನು ಪಡೆದುಕೊಂಡಿತ್ತು. ಪ್ರಚಂಡ್‌ ಎಂದೂ ಕರೆಯಲ್ಪಡುವ LCH, 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಇಳಿಯುವ ಮತ್ತು ಟೇಕ್ ಆಫ್ ಮಾಡುವ ವಿಶ್ವದ ಏಕೈಕ ಅಟ್ಯಾಕ್‌ ಹೆಲಿಕಾಪ್ಟರ್ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!