ಮಾಮೂಲಿಯಾಗಿ ನಮ್ಮ ಸೇಫ್ಟಿಗೆ ಹೆಲ್ಮೆಟ್ ಹಾಕ್ಲಬೇಕು. ಆದರೆ ಹಾಕೋದಿಲ್ಲ ಎಂದಾದರೆ ನಮ್ಮ ಜೀವ ನಮ್ಮಿಷ್ಟ ಎಂದಾಗುತ್ತದೆ. ಎಷ್ಟೋ ಮಂದಿಗೆ ಹೆಲ್ಮೆಟ್‌ನಿಂದ ಕೂದಲು, ತಲೆ ಸೆಕೆಯಾಗಿ ಕೂದಲು ಉದುರುತ್ತದೆ. ಇವೆಲ್ಲವೂ ಸಮಸ್ಯೆಯೇ ಬಟ್ ಇದಕ್ಕೂ ಸೊಲ್ಯೂಷನ್ ಇದೆ, ಏನು ನೋಡಿ..
ಈ ಬಿಸಿ ವಾತಾವರಣದಲ್ಲಿ ಹೆಲ್ಮೆಟ್ ಧರಿಸುವುದು ಕಿರಿಕಿರಿಯೆನಿಸುತ್ತದೆ ಎಂದಾದರೆ ಒಂದು ತೆಳು ಬಟ್ಟೆ ತಲೆಗೆ ಕಟ್ಟಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸುವುದು ಸೂಕ್ತ.
ಹೆಚ್ಚು ಹೊತ್ತು ಹೆಲ್ಮೆಟ್ ಧರಿಸಿದರೆ ಬೆವರು ಹೆಲ್ಮೆಟ್ ನಲ್ಲಿ ಶೇಖರಣೆಯಾಗುತ್ತದೆ, ಹೀಗಾಗಿ ಕೂದಲು ಮುಚ್ಚಲು ಕ್ಯಾಪ್ ಅಥವಾ ತೆಳುವಾದ ಬಟ್ಟೆ ಧರಿಸಿ, ಇದು ಬೆವರನ್ನು ಹೀರಿಕೊಳ್ಳುತ್ತದೆ.
ಬೇಸಿಗೆಯಲ್ಲಿ ಬಿಗಿಯಾದ ಹೆಲ್ಮೆಟ್ ಧರಿಸುವುದನ್ನು ಆದಷ್ಟು ತಪ್ಪಿಸಿ ಗಾಳಿಯ ಹರಿವು ಕಡಿಮೆಯಾಗುತ್ತದೆ. ಇದರಿಂದ ಇದು ಕೊಳಕು ಮತ್ತು ಬೆವರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಹೆಲ್ಮೆಟ್ ನನ್ನು ಸ್ವಚ್ಛಗೊಳಿಸುವ ಅಭ್ಯಾಸವಿರಲಿ. ಧೂಳು, ಕೊಳಕನ್ನು ತೆಗೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದರೆ ಹೆಲ್ಮೆಟ್ ತೊಳೆದ ನಂತರದಲ್ಲಿ ಹೇರ್ ಡ್ರೈಯರ್ ನಿಂದ ಒಣಗಿಸುವುದನ್ನು ತಪ್ಪಿಸಿ. ಹೀಗೆ ಮಾಡಿದರೆ ಗಮ್ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.
ಹೆಲ್ಮೆಟ್ ನನ್ನು ಎಲ್ಲೆಂದರಲ್ಲಿ ಇಡಬೇಡಿ, ಇದರಲ್ಲಿ ಧೂಳು ಸೇರಿಕೊಳ್ಳುತ್ತದೆ. ಅದೇ ಹೆಲ್ಮೆಟ್ ಧರಿಸಿದರೆ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಬೇಸಿಗೆಯಲ್ಲಿ ಬೆವರಿನಿಂದ ಹೆಲ್ಮೆಟ್ ಒಳಗೆ ವಾಸನೆ ಬರಲು ಶುರುವಾಗುತ್ತದೆ. ಹೀಗಾಗಿ ಹೆಲ್ಮೆಟ್ ದುರ್ವಾಸನೆ ಹೊಂದಿದ್ದರೇ ಹೆಲ್ಮೆಟ್ ಡಿಯೋಡರೈಸರ್ ಬಳಸಿ ಸ್ವಚ್ಚಗೊಳಿಸಿ.
ಕೂದಲನ್ನು ತೇವಗೊಳಿಸಿ ಹೆಲ್ಮೆಟ್ ಧರಿಸಿ, ಇದು ಹೆಲ್ಮೆಟ್‌ನ ಒಳ ಪದರ ಮತ್ತು ನಿಮ್ಮ ಕೂದಲಿನ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ.