ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ‘17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು ಉದ್ಘಾಟಿಸಿದ್ದಾರೆ.
‘ಈ ಬಾರಿ 70 ದೇಶಗಳ ಆಯ್ದ ಸುಮಾರಿ 240 ಸಿನಿಮಾಗಳ ಪ್ರದರ್ಶನ ಆಗಲಿದೆ. ರಾಯಬಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿದ್ದೇನೆ. ಅವರು ಬರೀ ಸಿನಿಮಾಗೆ ಸೀಮಿತ ಆಗಿಲ್ಲ. ಸಾಮಾಜಿಕ ಹೋರಾಟದಲ್ಲಿ ಕೂಡ ಭಾಗಿ ಆಗಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು.
ಕಳೆದ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಥೀಮ್ನಲ್ಲಿ ಚಿತ್ರೋತ್ಸವ ಮಾಡಲಾಗಿತ್ತು. ಈಗ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಿದ್ದೇನೆ. ಚಲನಚಿತ್ರ ಬರೀ ಮನರಂಜನೆಗೆ ಸೀಮಿತವಾಗಿರುವುದು ಅಲ್ಲ. ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದುವ ಕೆಲಸ ಆಗಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.
‘ಸಮಾಜದಲ್ಲಿ ಇಂದು ಅಸಮಾನತೆ, ಬಡತನ ಇದೆ. ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಇದ್ದಾರೆ. ಅವರ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ಜಗತ್ತಿನ ಮುಂದೆ ಇಡಬೇಕು. ಈ ಕೆಲಸವನ್ನು ರಾಜ್ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ಮಾಡಿದ್ದನ್ನು ನಾವು ನೋಡಿದ್ದೇನೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾಕೆ ಮಾಡುತ್ತೇವೆ ಎಂದರೆ, ಬೇರೆ ದೇಶಗಳ ಜನಜೀವನ, ರಾಜಕೀಯ, ಸಮಾಜ, ಪುರುಷರು-ಮಹಿಳೆಯರ ಸ್ಥಿತಿಗತಿ ಮುಂತಾದ್ದನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.



