ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಔರಂಗಾಬಾದ್ನಲ್ಲಿ ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯೊಬ್ಬರ ಶಿರಶ್ಛೇದನ ಮಾಡಿ ದೇಹವನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಯುಗುಲ್ ಯಾದಲ್(65) ಎಂದು ಗುರುತಿಸಲಾಗಿದೆ.
ಮಾ.13ರಂದು ಗುಲಾಬ್ ಬಿಘಾ ಗ್ರಾಮದ ನಿವಾಸಿ ಯುಗುಲ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತನಿಖೆಯ ಸಮಯದಲ್ಲಿ, ಬಂಗೇರ್ ಗ್ರಾಮದಲ್ಲಿ ಹೋಳಿಕಾ ದಹನ ಬೆಂಕಿಯ ಚಿತಾಭಸ್ಮದಿಂದ ಮಾನವ ಮೂಳೆಗಳು ಪತ್ತೆಯಾಗಿದ್ದವು.
ತಕ್ಷಣವೇ ಶ್ವಾನ ದಳವನ್ನು ನಿಯೋಜಿಸಲಾಯಿತು. ಶ್ವಾನವು ತನಿಖಾಧಿಕಾರಿಗಳನ್ನು ಮಾಂತ್ರಿಕ ರಾಮಶಿಶ್ ರಿಕ್ಯಾಸನ್ ಮನೆಗೆ ಕರೆದೊಯ್ಯಿತು. ರಾಮಶಿಶ್ ಮನೆಯಲ್ಲಿ ಇಲ್ಲದಿದ್ದಾಗ, ಈ ಕೃತ್ಯದಲ್ಲಿ ಆತನ ಸಂಬಂಧಿ ಧರ್ಮೇಂದ್ರ ಭಾಗಿಯಾಗಿರುವ ಮಾಹಿತಿ ಮೇರೆಗೆ ಬಂಧಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಧರ್ಮೇಂದ್ರ ತಾನು ಮತ್ತು ಇತರರು ಮಾಟಮಂತ್ರದ ಭಾಗವಾಗಿ ಯುಗಲ್ನನ್ನು ಅಪಹರಿಸಿ ಶಿರಚ್ಛೇದ ಮಾಡಿರುವುದಾಗಿ ಹಾಗೂ ಹೋಳಿಕಾ ದಹನ್ ಬೆಂಕಿಯಲ್ಲಿ ಯುಗಲ್ ಮುಂಡವನ್ನು ಸುಟ್ಟು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.