ಬ್ಯಾಕ್ ಟು ಬ್ಯಾಕ್ ವಿನ್: ಏಕಾಏಕಿ ವರಸೆ ಬದಲಿಸಿದ ರಾಯುಡು, RCB ಬಗ್ಗೆ ಏನಾದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

RCB ತಂಡದ ವಿರುದ್ಧ ಸದಾ ಕೊಂಕು ಮಾತನಾಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಇದೀಗ ಯೂಟರ್ನ್ ಹೊಡೆದಿದ್ದಾರೆ.

ಅದು ಕೂಡ ಸಿಎಸ್​ಕೆ ವಿರುದ್ಧ ಆರ್​ಸಿಬಿ ತಂಡವು ಭರ್ಜರಿ ಜಯ ಸಾಧಿಸುತ್ತಿದ್ದಂತೆ ತಮ್ಮ ಹೇಳಿಕೆಯನ್ನೇ ಬದಲಾಯಿಸಿದ್ದಾರೆ.

ಹೌದು, ಪ್ರಮುಖ ಸ್ಪೋರ್ಟ್ಸ್​ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಈ ಬಾರಿಯ ಆರ್​ಸಿಬಿ ತಂಡವು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದೆ. ಅದರಲ್ಲೂ ತಂಡ ಅದ್ಭುತವಾಗಿದೆ, ಏನೋ ಸಾಧಿಸುವ ಹಂಬಲ ಆರ್​ಸಿಬಿ ತಂಡದಲ್ಲಿ ಕಾಣಿಸುತ್ತಿದೆ. ಹೀಗಾಗಿ ಆರ್​ಸಿಬಿ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!