ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನಾಗ್ಪುರದ ದೀಕ್ಷಭೂಮಿಗೆ ಭೇಟಿ ನೀಡಿದ್ದಾರೆ. 1956 ರಲ್ಲಿ ಭಾರತೀಯ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡ ಸ್ಥಳ ಇದಾಗಿದೆ.
ದೀಕ್ಷಭೂಮಿಯಲ್ಲಿರುವ ಬುದ್ಧನ ಪ್ರತಿಮೆಗೂ ಪ್ರಧಾನಿ ಪ್ರಾರ್ಥನೆ ಸಲ್ಲಿಸಿದರು. ದೀಕ್ಷಭೂಮಿಯ ಸನ್ಯಾಸಿಗಳು ಪ್ರಧಾನ ಮಂತ್ರಿಯವರಿಗೆ ಪುಷ್ಪಗುಚ್ಛ ಮತ್ತು ಶಾಲು ನೀಡಿ ಸನ್ಮಾನಿಸಿದರು.
ಇದಕ್ಕೂ ಮೊದಲು, ಪ್ರಧಾನಿ ಮೋದಿ ನಾಗ್ಪುರದ ರೇಶಿಂಬಾಗ್‌ನಲ್ಲಿರುವ ಸ್ಮೃತಿ ಮಂದಿರದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಂ ಹೆಡ್ಗೆವಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.