ಅಮೆರಿಕದ ನೆರವು ಸಾಲವಲ್ಲ, ಒಂದು ಪೈಸೆ ಕೂಡ ವಾಪಾಸ್‌ ನೀಡೋದಿಲ್ಲ: ಟ್ರಂಪ್‌ಗೆ ಸೆಡ್ಡು ಹೊಡೆದ ಝೆಲೆನ್ಸ್ಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ-ರಷ್ಯಾ ನಡುವಿನ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ದಿಟ್ಟ ಉತ್ತರ ನೀಡಿದ್ದಾರೆ. ಅಮೆರಿಕದಿಂದ ಪಡೆದ ಮಿಲಿಟರಿ ನೆರವನ್ನು ಉಕ್ರೇನ್ ಯಾವುದೇ ಕಾರಣಕ್ಕೂ ಸಾಲವೆಂದು ಪರಿಗಣಿಸುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.

ನಾವು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದ್ದೇವೆ ಮತ್ತು ಈ ಬೆಂಬಲ ಕೇವಲ ಉಕ್ರೇನ್‌ಗೆ ಮಾತ್ರವಲ್ಲ, ಇಡೀ ಪ್ರಪಂಚದ ಸ್ಥಿರತೆಗಾಗಿ ಆಗಿದೆ. ಅಮೆರಿಕ ಮಾಡಿದ ಸಹಾಯ ಸಾಲವಲ್ಲ ಮತ್ತು ಆ ಹಣವನ್ನು ನಾವು ಎಂದಿಗೂ ಹಿಂದಿರುಗಿಸುವುದಿಲ್ಲ ಎಂದಿದ್ದಾರೆ.

ರಷ್ಯಾ 2022 ರಲ್ಲಿ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ವಾಷಿಂಗ್ಟನ್ ಉಕ್ರೇನ್‌ಗೆ $66.5 ಬಿಲಿಯನ್ ಮಿಲಿಟರಿ ಸಹಾಯವನ್ನು ಒದಗಿಸಿದೆ ಎಂದು ಯುಎಸ್ ವಿದೇಶಾಂಗ ಇಲಾಖೆ ದೃಢಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!