January 29, 2026
Thursday, January 29, 2026
spot_img

ನೈತಿಕ ಬಳಕೆಯಲ್ಲಿ ಯಾವುದೇ ರಾಜಿ ಇಲ್ಲ: ಎಐ ಸಿಇಒಗಳ ಜೊತೆ ಪ್ರಧಾನಿ ಮೋದಿ ಸಮಾಲೋಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ,ಭಾರತೀಯ ಎಐ ಸ್ಟಾರ್ಟ್-ಅಪ್ಸ್ ಮತ್ತು ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರದ ಸಿಇಒಗಳು ಹಾಗೂ ತಜ್ಞರ ಜೊತೆ ಮಹತ್ವದ ದುಂಡುಮೇಜಿನ ಸಭೆ ನಡೆಸಿದರು. ಎಐ ಕ್ಷೇತ್ರದಲ್ಲಿ ನೈತಿಕ ಬಳಕೆಗೆ ಸಂಬಂಽಸಿ ಯಾವುದೇ ರಾಜಿ ಮಾಡಲಾಗದು ಎಂದು ಒತ್ತಿ ಹೇಳಿದ ಅವರು, ಯುಪಿಐ ಮಾದರಿಯಲ್ಲಿ ಬೆಳವಣಿಗೆ ಸಾಧ್ಯತೆ ಬಗ್ಗೆ ಚಿಂತನೆ ನಡೆಸುವಂತೆ ತಜ್ಞರಿಗೆ ಸೂಚಿಸಿದ್ದಾರೆ.


ನಾವು ಎಐ ಇಕೋಸಿಸ್ಟಮ್ ಒಂದರ ರಚನೆಯತ್ತ ಕಾರ್ಯನಿರ್ವಹಿಸಬೇಕಿದೆ. ಇದು ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಸುರಕ್ಷಿತವಾಗಿರುವಂತಹದ್ದಾಗಿರಬೇಕು.ಆದರೆ ಯಾವುದೇ ಕಾರಣಕ್ಕೂ ಎಐಯ ನೈತಿಕ ಬಳಕೆ ವಿಷಯದಲ್ಲಿ ಯಾವುದೇ ರಾಜಿ ಅಸಾಧ್ಯ . ಇದೇ ವೇಳೆ ಎಐ ಕೌಶಲ ಮತ್ತು ಪ್ರತಿಭಾ ನಿರ್ಮಾಣದ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಭಾರತೀಯ ಎಐ ಪಾರಿಸರಕ ವ್ಯವಸ್ಥೆಯು ದೇಶದ ಗುಣಲಕ್ಷಣ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕು ಎಂಬುದಾಗಿ ಪ್ರಧಾನಿಯವರು ಒತ್ತಿ ಹೇಳಿದರು.ಈ ದುಂಡುಮೇಜಿನ ಸಭೆಯಲ್ಲಿ ಎಐ-ಚಾಲಿತ ಕಂಪೆನಿಗಳಾದ ವಿಪ್ರೋ, ಟಿಸಿಎಸ್, ಎಚ್‌ಸಿಎಲ್ ಟೆಕ್, ಝೊಹೋ ಕಾರ್ಪೊರೇಷನ್ , ಎಲಂಟಿಐ ಮೈಂಡ್‌ಟ್ರೀ, ಜಿಯೋ ಪ್ಲ್ಯಾಟ್-ರ್ಮ್ಸ್ ಲಿಮಿಟೆಡ್, ಅದಾನಿಕನ್ನೆಕ್ಸ್ , ಎನ್‌ಎಕ್ಸ್‌ಟ್ರಾ ಡಾಟಾ ಅಂಡ್ ನೆಟ್‌ವೆಬ್ ಟೆಕ್ನಾಲಜೀಸ್‌ಗಳಲ್ಲದೆ, ಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಬಾಂಬೆಗಳ ತಜ್ಞರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ , ಕೇಂದ್ರ ಸಹಾಯಕ ಸಚಿವ ಜಿತಿನ್ ಪ್ರಸಾದ ಅವರು ಕೂಡ ಉಪಸ್ಥಿತರಿದ್ದರು.

ಮಾರ್ಗಸೂಚಿಗೆ ಕರೆ
ದೇಶದ ಬೆಳವಣಿಗೆಗೆ ಉತ್ತೇಜನ ನೀಡಲು ಹೊಸ ತಂತ್ರಜ್ಞಾನಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದ ಅವರು, ಇಲ್ಲಿ ದೇಶೀಯ ಪರಿಹಾರಗಳ ಬಳಕೆಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದರು.ಭಾರತವನ್ನು ಎಲ್ಲ ಜಾಗತಿಕ ಎಐ ಪ್ರಯತ್ನಗಳಿಗಾಗಿ ಒಂದು -ಲವತ್ತಾದ ತಾಣವನ್ನಾಗಿಸುವಂತೆ ಅವರು ಸಿಇಒಗಳು ಮತ್ತು ತಜ್ಞರನ್ನು ಆಗ್ರಹಿಸಿದರು.

ಯುಪಿಐ ಮಾದರಿಯಲ್ಲೇ ಎಐ ಕ್ಷೇತ್ರದಲ್ಲೂ ಸಾಧನೆಗೆ ಕರೆ
ಭಾರತೀಯ ಡಿಜಿಟಲ್ ಸಾಧನೆಗಳನ್ನು ಎತ್ತಿತೋರಿದ ಅವರು, ಏಕೀಕೃತ ಪಾವತಿಗಳ ಇಂಟರ್-ಸ್(ಯುಪಿಐ)ಮೂಲಕ ಭಾರತ ತನ್ನ ತಾಂತ್ರಿಕ ಪಾರಮ್ಯವನ್ನು ಈಗಾಗಲೇ ಪ್ರದರ್ಶಿಸಿದೆ. ಇದನ್ನೇ ಎಐ ರಂಗದಲ್ಲೂ ನಾವು ಸಾಽಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ನಾವೀಗ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಅವರು ಸೂಚಿಸಿದರು

ಭಾರತವು ಪ್ರಮಾಣ, ವೈವಿಧ್ಯತೆ ಮತ್ತು ಪ್ರಜಾತಂತ್ರಗಳ ವಿಶಿಷ್ಟ ನೆಲೆಗಟ್ಟನ್ನು ಹೊಂದಿದ್ದು, ಇದು ಭಾರತೀಯ ಡಿಜಿಟಲ್ ಮೂಲಸೌಕರ್ಯವನ್ನು ಜಗತ್ತು ವಿಶ್ವಾಸದಿಂದ ನೋಡುವಂತೆ ಮಾಡಿದೆ .ಈಗ “ಎಐ -ರ್ ಆಲ್”ಎಂಬ ದೃಷ್ಟಿಕೋನದಡಿ ನಾವು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದು ಜಗತ್ತಿಗೆ ಸೂರ್ತಿ ಮತ್ತು ನೈಜ ಪರಿಣಾಮವನ್ನು ಸೃಷ್ಟಿಸುವಂತಿರಬೇಕು. ಜಾಗತಿಕ ಎಐ ಪ್ರಯತ್ನಗಳಿಗಾಗಿ ಭಾರತವನ್ನು ಒಂದು ಪ್ರಮುಖ ತಾಣವನ್ನಾಗಿ ಮಾಡಬೇಕು ಎಂದು ಅವರು ಎಂದು ಅವರು ತಜ್ಞರಿಗೆ ಸೂಚಿಸಿದರು ಎಂದು ಪಿಎಂಒ ಕಚೇರಿಯ ಹೇಳಿಕೆ ತಿಳಿಸಿದೆ.

ಫೆಬ್ರವರಿಯಲ್ಲಿ ನಡೆಯುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸಭೆ ಅತ್ಯಂತ ಮಹತ್ವದ್ದೆಂದು ಹೇಳಲಾಗಿದೆ.ಪ್ರಧಾನಿ ಮೋದಿಯವರ ಈ ಸಲಹೆಗಳನ್ನು ಸ್ವೀಕರಿಸಿದ ಕೈಗಾರಿಕಾ ಪ್ರಮುಖರು, ಎಐ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ರಂಗದ ನಾಯಕನನ್ನಾಗಿಸುವಲ್ಲಿ ಸರಕಾರದ ಪ್ರಯತ್ನಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ .ಇದಕ್ಕೂ ಮುನ್ನ ,ಬುಧವಾರ ಪ್ರಧಾನಿ ಮೋದಿಯವರು ೨೭ ಪ್ರಮುಖ ಜಾಗತಿಕ ಮತ್ತು ಭಾರತೀಯ ಇಂಧನ ಕಂಪೆನಿಗಳ ಸಿಇಒಗಳ ಜೊತೆಗೂ ಸಂವಾದ ನಡೆಸಿದ್ದರು. ಸಚಿವರಾದ ಹರ್ದೀಪ್‌ಸಿಂಗ್ ಪುರಿ, ಸುರೇಶ್ ಗೋಪಿ ಹಾಗೂ ಉನ್ನತ ಅಽಕಾರಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !